ಟುಲ್ನ್, ಆಸ್ಟ್ರಿಯಾ (ಪಿಟಿಐ): ಭಾರತದ ಸುಮಿತ್ ನಗಾಲ್ ಅವರು ಎಟಿಪಿ ಟುಲ್ನ್ ಚಾಲೆಂಜರ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಜೆಕ್ ರಿಪಬ್ಲಿಕ್‌ನ ವಿಟ್ ಕೊಪ್ರಿವಾ ಎದುರು ಪರಾಭವಗೊಂಡರು.
ಭಾನುವಾರ ನಡೆದ ಪಂದ್ಯದಲ್ಲಿ ರ್‍ಯಾಂಕಿಂಗ್‌ನಲ್ಲಿ ತಮಗಿಂತ ಐದು ಸ್ಥಾನಗಳಷ್ಟು ಕೆಳಗೆ ಇರುವ (194) ಎದುರಾಳಿಯ ಕೈಯಲ್ಲಿ ನಗಾಲ್ 2–6, 4–6 ರಿಂದ ಸೋತರು.
ಚಾಲೆಂಜರ್ ಟೂರ್ನಿಯಲ್ಲಿ ಭಾರತದ ಆಟಗಾರನಿಗೆ ಇದು ಮೂರನೇ ಫೈನಲ್ ಆಗಿತ್ತು. ಅವರು ಈ ವರ್ಷದ ಆರಂಭದಲ್ಲಿ ರೋಮ್ (ಏಪ್ರಿಲ್) ಮತ್ತು ಟೆಂಪೆರೆ (ಜುಲೈ) ಚಾಲೆಂಜರ್ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದರು.
ಸಿಂಗಲ್ಸ್ ವಿಭಾಗದಲ್ಲಿ ಭಾರತದ ಅಗ್ರಮಾನ್ಯ ಆಟಗಾರನಾಗಿರುವ ನಗಾಲ್, ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ 60 ರ್‍ಯಾಂಕಿಂಗ್ ಪಾಯಿಂಟ್ಸ್‌ಗಳನ್ನು ಗಿಟ್ಟಿಸಿಕೊಂಡರು. ಹೊಸ ರ್‍ಯಾಂಕಿಂಗ್ ಪಟ್ಟಿಯಲ್ಲಿ 33 ಕ್ರಮಾಂಕ ಮೇಲಕ್ಕೇರಲಿರುವ ಅವರು 156ನೇ ಸ್ಥಾನ ಪಡೆಯಲಿದ್ದಾರೆ.