ಭಾನುವಾರ, ಆಗಸ್ಟ್ 1, 2021
22 °C

ಜೊಕೊವಿಚ್‌ ದಂಪತಿಗೆ ಕೊರೊನಾ ಸೋಂಕಿಲ್ಲ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೆಲ್‌ಗ್ರೇಡ್‌: ಸರ್ಬಿಯಾದ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಹಾಗೂ ಅವರ ಪತ್ನಿ ಜೆಲೆನಾಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ.

ಹತ್ತು ದಿನಗಳ ಹಿಂದೆ ಜೊಕೊವಿಚ್‌ ದಂಪತಿಗೆ ಕೋವಿಡ್‌ ಇರುವುದು ಖಚಿತಪಟ್ಟಿತ್ತು. ಜೊಕೊವಿಚ್‌ ಅವರೇ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌, ಏಡ್ರಿಯಾ ಪ್ರದರ್ಶನ ಟೆನಿಸ್‌ ಟೂರ್ನಿಯನ್ನು ಆಯೋಜಿಸಿದ್ದರು.

ಬೆಲ್‌ಗ್ರೇಡ್‌ ಹಾಗೂ ಕ್ರೊವೇಷ್ಯಾದ ಜಾದರ್‌ನಲ್ಲಿ ಆಯೋಜನೆಯಾಗಿದ್ದ ಈ ಟೂರ್ನಿಯಲ್ಲಿ ವಿಶ್ವದ ಪ್ರಮುಖ ಆಟಗಾರರು ಪಾಲ್ಗೊಂಡಿದ್ದರು. ಈ ಪೈಕಿ ಜೊಕೊವಿಚ್‌, ಗ್ರಿಗರ್‌ ಡಿಮಿಟ್ರೋವ್‌, ಬೊರ್ನಾ ಕೊರಿಕ್‌ ಮತ್ತು ವಿಕ್ಟರ್‌ ಟ್ರೋಯಿಕಿ ಅವರಿಗೆ ಕೋವಿಡ್‌ ಇರುವುದು ಖಾತರಿಯಾಗಿತ್ತು. ಜೊಕೊವಿಚ್‌ ಅವರ ಕೋಚ್‌ ಗೊರಾನ್‌ ಇವಾನೆಸೆವಿಚ್‌ ಅವರಿಗೂ ಸೋಂಕು ತಗುಲಿತ್ತು. 

‘ಜೊಕೊವಿಚ್‌ ಮತ್ತು ಜೆಲೆನಾ ಅವರು ಎರಡನೇ ಸಲ ಕೋವಿಡ್‌ ಪರೀಕ್ಷೆ ಎದುರಿಸಿದ್ದರು. ಅದರ ವರದಿ ಬಂದಿದ್ದು, ಇಬ್ಬರಿಗೂ ಸೋಂಕು ತಗುಲಿಲ್ಲ ಎಂಬುದು ಖಚಿತಪಟ್ಟಿದೆ. ಇಬ್ಬರೂ ಸ್ವಯಂ ಪ್ರತ್ಯೇಕವಾಸದಲ್ಲಿ ಇರಲಿದ್ದಾರೆ’ ಎಂದು ಜೊಕೊವಿಚ್‌ ಅವರ ಮಾಧ್ಯಮ ತಂಡವು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು