ಬುಧವಾರ, ಅಕ್ಟೋಬರ್ 23, 2019
21 °C

ಒಸಾಕಗೆ ಪ್ಯಾನ್ ಪೆಸಿಫಿಕ್‌ ಓಪನ್‌ ಪ್ರಶಸ್ತಿ

Published:
Updated:
Prajavani

ಟೋಕಿಯೊ: ಜಪಾನ್‌ನ ನವೊಮಿ ಒಸಾಕ, ಪ್ಯಾನ್ ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಅವರು ರಷ್ಯಾದ ಅನಸ್ತಾಸಿಯಾ ಪಾವ್ಲಿಚೆಂಕೊವಾ ಎದುರು 6–2, 6–3 ಸೆಟ್‌ಗಳಿಂದ ಜಯ ಸಾಧಿಸಿದರು. ಜನವರಿಯಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದ ಬಳಿಕ ಒಸಾಕ ಈ ವರ್ಷ ಗಳಿಸಿದ ಮೊದಲ ಪ್ರಶಸ್ತಿ ಇದು.

ಇಲ್ಲಿ ಅವರು ಟ್ರೋಫಿ ಗೆಲ್ಲುವುದರೊಂದಿಗೆ ಲಯಕ್ಕೆ ಮರಳಿದರು. 24 ವರ್ಷಗಳ ಬಳಿಕ ಪ್ಯಾನ್ ಪೆಸಿಫಿಕ್‌ ಓಪನ್‌ ಪ್ರಶಸ್ತಿ ಗೆದ್ದ ಜಪಾನ್‌ ಆಟಗಾರ್ತಿ ಎನಿಸಿಕೊಂಡರು. 1995ರಲ್ಲಿ ಕಿಮಿಕೊ ಡಾಟೆ ಇಲ್ಲಿ ಚಾಂಪಿಯನ್‌ ಆಗಿದ್ದರು.

ಶಕ್ತಿಶಾಲಿ ಸರ್ವ್‌ಗಳ ಮೂಲಕ ತವರಿನ ಪ್ರೇಕ್ಷಕರನ್ನು ರಂಜಿಸಿದ ಒಸಾಕಾ, ವಿಶ್ವದ 41ನೇ ರ‍್ಯಾಂಕಿನ ಆಟಗಾರ್ತಿಯ ಎದುರು ಪಾರಮ್ಯ ಮೆರೆದರು. 2016 ಹಾಗೂ 2018ರಲ್ಲಿ ಇಲ್ಲಿ ಫೈನಲ್‌ ತಲುಪಿದ್ದ ಜಪಾನ್‌ ಆಟಗಾರ್ತಿಗೆ ನಿರಾಸೆ ಎದುರಾಗಿತ್ತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)