ಮೆಲ್ಬರ್ನ್ನಲ್ಲಿ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯ ಸೆಮಿಫೈನಲ್ನಲ್ಲಿ ನೋವಾಕ್ ಜಕೋವಿಕ್ ಅವರು ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಅವರನ್ನು ಮಣಿಸಿದರು. ಹೀಗೆ ಸೋತ ಫೆಡರರ್ ಹಿಂದೆ 17 ಬಾರಿ ಈ ಟೂರ್ನಿಯನ್ನು ಗೆದ್ದುಕೊಂಡಿದ್ದರು ಎಂಬುದನ್ನು ಮರೆಯುವಂತಿಲ್ಲ.

ಆರು ಅಡಿ ಎತ್ತರದ, 86 ಕೆ.ಜಿ ತೂಕದ ಫೆಡರರ್, ಟೆನ್ನಿಸ್ ರ್ಯಾಕೆಟ್ ಹಿಡಿದು ಅಂಕಣಕ್ಕೆ ಇಳಿದರೆ, ತಮಗೆ 39 ವರ್ಷ ವಯಸ್ಸಾಗಿದೆ ಎಂಬುದನ್ನೇ ಮರೆಸುವಂತೆ ಆಟವಾಡುತ್ತಾರೆ. ಈ ವಯಸ್ಸಿನಲ್ಲೂ ಅಚ್ಚರಿ ಹುಟ್ಟಿಸುವ ಮಟ್ಟದಲ್ಲಿ ಫಿಟ್ನೆಸ್ ಕಾಯ್ದುಕೊಂಡಿರುವ ಫೆಡರರ್ ತಮ್ಮ ಊಟ, ವ್ಯಾಯಾಮ, ಲೈಫ್ಸ್ಟೈಲ್ ವಿಷಯದಲ್ಲಿ ಬಹಳ ಸರಳವಾಗಿದ್ದಾರೆ.

ದಿನದಲ್ಲಿ ಎರಡು–ಮೂರು ಗಂಟೆಗಳಿಗೊಮ್ಮೆ ತಾಜಾ ಹಣ್ಣುಗಳನ್ನು, ಹಣ್ಣಿನ ಜ್ಯೂಸ್ ಸೇವಿಸುತ್ತಾರೆ. ನಡುನಡುವೆ ಕಾಫಿ, ವಿನೆಗರ್ ಸೇವನೆ ಕೂಡ ಇವರ ಡಯಟ್ ಪಟ್ಟಿಯಲ್ಲಿದೆ.

ಊಟದ ವಿಷಯದಲ್ಲೂ ಅವರು ತುಂಬಾ ಸರಳ. ಲಘು ಪ್ರೊಟಿನ್ ಇರುವ ಆಹಾರ ಸೇವಿಸುತ್ತಾರೆ. ಲಘು ಮಾಂಸಾಹಾರ ಸೇವಿಸುತ್ತಾರೆ. ಇಟಲಿ, ಜಪಾನ್ ಮತ್ತು ಭಾರತೀಯ ಸಾಂಪ್ರದಾಯಿಕ ಆಹಾರಗಳೆಂದರೆ ಅವರಿಗೆ ಇಷ್ಟವಂತೆ. ಐಸ್ಕ್ರೀಂ, ಚಾಕೊಲೇಟ್ ಅಂದ್ರೆ ಬಹಳ ಇಷ್ಟ. ಅವುಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ತಿನ್ನುತ್ತಾರೆ. ಆಫ್ಸೀಸನ್ನಲ್ಲಿ ಒಮ್ಮೊಮ್ಮೆ ಒಣಹಣ್ಣು ತಿನ್ನುತ್ತಾರೆ. ಫಾಸ್ಟ್ಫುಡ್, ಸಂಸ್ಕರಿತ, ಕೃತಕ ಇನ್ಗ್ರೇಡಿಯಂಟ್ಗಳು, ಸಕ್ಕರೆ ಇರುವ ಲಘುಪಾನೀಯಗಳಿಂದ ಬಹುದೂರ.

ನಿತ್ಯ ವ್ಯಾಯಾಮ ಕಡ್ಡಾಯ. ಅವಕಾಶ ಸಿಕ್ಕರೆ ನಿತ್ಯ ಹತ್ತು ಗಂಟೆ ನಿದ್ದೆ ಮಾಡುತ್ತಾರಂತೆ. ಮ್ಯಾಚ್ ವೇಳೆ, ಅಂಕಣಕ್ಕೆ ಇಳಿಯುವ ಎರಡು ಗಂಟೆಗಳಿಗೂ ಮುನ್ನ ಒಂದು ಪ್ಲೇಟ್ ಪಾಸ್ತಾ ತಿನ್ನುತ್ತಾರೆ. ಅಭ್ಯಾಸದ ವೇಳೆಯೂ ಇದೇ ಆಹಾರ ಪದ್ಧತಿ ಅನುಸರಿಸುತ್ತಾರೆ.

‘ಆರೋಗ್ಯಪೂರ್ಣ ಆಹಾರ ಸೇವಿಸುತ್ತೇನೆ. ಆರೋಗ್ಯದಿಂದ್ದೇನೆ. ಆದರೆ, ಆಹಾರದ ಬಗ್ಗೆ ಅತಿಯಾದ ಕಾಳಜಿವಹಿಸುವುದಿಲ್ಲ’ ಎನ್ನುವುದು ಫೆಡರರ್ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.