ಫೆಡರರ್, ಜೋಕೊವಿಕ್, ನಡಾಲ್ ಎಲ್ಲ ಟೆನ್ನಿಸ್ ದೇವರು: ನಿಕ್ ಕಿರ್ಗಿಯೊಸ್
ಲಂಡನ್: ಟೆನ್ನಿಸ್ ಪ್ರಪಂಚಕ್ಕೆ ರೋಜರ್ ಫೆಡರರ್, ನೋವಾ ಜೋಕೊವಿಕ್, ರಫೆಲ್ ನಡಾಲ್ ದೇವರು ಎಂದು ಆಸ್ಟ್ರೇಲಿಯಾದ ಟೆನ್ನಿಸ್ ತಾರೆ ನಿಕ್ ಕಿರ್ಗಿಯೊಸ್ ಬಣ್ಣಿಸಿದ್ದಾರೆ.
ಪ್ರಸಕ್ತ ಸನ್ನಿವೇಶದಲ್ಲಿ ಕ್ರೀಡೆಯತ್ತ ಜನರನ್ನು ಸೆಳೆಯಬಲ್ಲ, ಅಭಿಮಾನಿಗಳು ಕ್ರೀಡೆಯನ್ನು ಹೆಚ್ಚು ನೋಡುವಂತೆ ಮಾಡಬಲ್ಲ ಆಟಗಾರರು ಬೇಕಾಗಿದ್ದಾರೆ. ಅಂತಹ ಆಟಗಾರರಲ್ಲಿ ನಾನೂ ಒಬ್ಬನಿರಬಹುದೆಂದು ಭಾವಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ವಿಂಬಲ್ಡನ್‌ನ ಎರಡನೇ ಸುತ್ತಿನಲ್ಲಿ ಇಟಲಿಯ ಗಿಯಾನ್‌ಲುಕಾ ಮಗೆರ್ ಅವರನ್ನು 7-6(9/7), 6-4, 6-4 ಸೆಟ್‌ಗಳಿಂದ ಮಣಿಸಿದ ನಿಕ್, 'ಎಲ್ಲರಿಗೂ ಫೆಡರರ್ ಅಥವಾ ಜೋಕೊವಿಕ್ ಅಥವಾ ನಡಾಲ್ ಆಗಲು ಸಾಧ್ಯವಿಲ್ಲ. ಇವರೆಲ್ಲರೂ ಲಕ್ಷಾಂತರ ಮಂದಿಗೆ ಸ್ಪೂರ್ತಿ ನೀಡುವಂತಹ ಆಟಗಾರರು. ಇಂತಹ ಆಟಗಾರರು ದಶಕಕ್ಕೆ ಒಬ್ಬರಂತೆ ಸಿಗುತ್ತಾರೆ. ಅವರು ದೇವರುಗಳು. ನಾನೂ ಅವರನ್ನು ದೇವರ ಸ್ಥಾನದಲ್ಲಿಯೇ ನೋಡುತ್ತೇನೆ' ಎಂದಿದ್ದಾರೆ.
ವಿಡಿಯೊ: ಸ್ಟಾರ್ಟಪ್ ಬಾತುಕೋಳಿಯಂತಿದ್ದರೆ ಹುಲಿ ಬಾಯಿಂದ ನುಣುಚಿಕೊಳ್ಳಬಹುದು!
ಟೆನ್ನಿಸ್‌ನ ಕಿರಿಕ್ ಪಾರ್ಟಿಯೆಂದೇ ಗುರುತಿಸಿಕೊಂಡಿರುವ 26 ವರ್ಷದ ಕಿರ್ಗಿಯೊಸ್ ಶನಿವಾರ ನಡೆಯಲಿರುವ ಮೂರನೇ ಸುತ್ತಿನಲ್ಲಿ ಕೆನಡಾದ ಫೆಲಿಕ್ಸ್ ಅಗರ್ ಅಲಿಯಸಿಮ್ ಜೊತೆ ಸೆಣೆಸಲಿದ್ದಾರೆ.
'ಆದರೆ ಪ್ರಸ್ತುತ ಇತರ ಅಭಿಮಾನಿಗಳನ್ನು ಸೆಳೆಯುವಂತಹ ಆಟಗಾರರು ಬೇಕಾಗಿದ್ದಾರೆ. ಪ್ರೇಕ್ಷಕರು ಬಯಸುವ ಅಂತಹ ಆಟಗಾರರು ಇದ್ದಾರೆ ಎಂಬುದನ್ನು ನಂಬಿದ್ದೇನೆ. ಅಂತಹ ಆಟಗಾರರ ಪೈಕಿ ನಾನೂ ಒಬ್ಬ ಎಂದೆನಿಸುತ್ತದೆ. ನಾನು ನಿಕ್ ಕಿರ್ಗಿಯೊಸ್. ನನಗೆ ನಾನೇನು ಎಂಬುದು ಗೊತ್ತಿದೆ' ಎಂದು ಸದಾ ವಿವಾದಗಳಿಂದ ಸದ್ದು ಮಾಡುತ್ತಿರುವ ನಿಕ್ ಹೇಳಿದ್ದಾರೆ ಎಂದು 'ಎನ್‌ಡಿಟಿವಿ' ವರದಿ ಮಾಡಿದೆ.
ವಿಶ್ವ ಭೂಪಟ: ಚರ್ಚೆಗೆ ಗ್ರಾಸವಾದ ಮಹಾಭಾರತದ ಮೊಲ ಮತ್ತು ಆಲದಮರದ ಎಲೆಗಳ ಕಥೆ
ಕ್ರೀಡೆ ಮತ್ತು ಕ್ರೀಡಾಸಂಪ್ರದಾಯದ ಬಗ್ಗೆ ಗೌರವ ಹೊಂದಿಲ್ಲ ಎಂದು ನಿಕ್ ವಿರುದ್ಧ ನಡಾಲ್ ಮತ್ತು ಜೋಕೊವಿಕ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ನಡಾಲ್ ಅವರನ್ನು 'ಸೂಪರ್ ಸಾಲ್ಟಿ' ಮತ್ತು ಜೋಕೊವಿಕ್ ಅವರನ್ನು 'ಅ ಟೂಲ್' ಎಂದಿದ್ದರು.
Explainer: ಐಎಂಡಿಬಿ ಟಾಪ್ 250ರ ಪಟ್ಟಿಯಲ್ಲಿ ಇರೋದೇ ಕನ್ನಡದ ಎರಡು ಚಿತ್ರಗಳು!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.