ಶುಕ್ರವಾರ, ಏಪ್ರಿಲ್ 10, 2020
19 °C

ಕೆಎಸ್‌ಎಲ್‌ಟಿಎಗೆ ಬೋಪಣ್ಣ ಉಪಾಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟೆನಿಸ್ ಆಟಗಾರ ರೋಹನ್‌ ಬೋಪಣ್ಣ ಅವರು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ನಡೆದ ಕೆಎಸ್‌ಎಲ್‌ಟಿಎ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಕುರಿತು ಸಂಸ್ಥೆಯು ಗುರುವಾರ ಪ್ರಕಟಣೆ ನೀಡಿದೆ.

ಈಗ ಆಯ್ಕೆಯಾದ ಪದಾಧಿಕಾರಿಗಳ ಅವಧಿ ನಾಲ್ಕು ವರ್ಷಗಳದ್ದಾಗಿದೆ.

ಪದಾಧಿಕಾರಿಗಳು: ಆರ್‌.ಅಶೋಕ (ಅಧ್ಯಕ್ಷ), ಎಂ. ಲಕ್ಷ್ಮೀನಾರಾಯಣ (ಆಜೀವ ಉಪಾಧ್ಯಕ್ಷ), ಪ್ರಿಯಾಂಕ್‌ ಎಂ. ಖರ್ಗೆ (ಹಿರಿಯ ಉಪಾಧ್ಯಕ್ಷ), ಎಂ.ಬಿ.ದ್ಯಾಬೇರಿ, ಪಿ.ಆರ್‌.ರಾಮಸ್ವಾಮಿ, ರೋಹನ್‌ ಬೋಪಣ್ಣ, ಆಶಿಶ್‌ ಪುರವಂಕರ (ಎಲ್ಲರೂ ಉಪಾಧ್ಯಕ್ಷರು), ಮಹೇಶ್ವರ ರಾವ್‌ (ಕಾರ್ಯದರ್ಶಿ), ಸುನಿಲ್‌ ಯಜಮಾನ್‌ (ಜಂಟಿ ಕಾರ್ಯದರ್ಶಿ), ನಾಗಾನಂದ ದೊರೆಸ್ವಾಮಿ (ಖಜಾಂಚಿ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು