ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಎಲೆನಾ ರಿಬಾಕಿನಾಗೆ ಬ್ರಿಸ್ಬೇನ್ ಓಪನ್ ಕಿರೀಟ

ಆರು ವರ್ಷಗಳಲ್ಲಿ ಮೊದಲ ಪ್ರಶಸ್ತಿ ಗೆದ್ದ ಡಿಮಿಟ್ರೋವ್
Published 7 ಜನವರಿ 2024, 15:54 IST
Last Updated 7 ಜನವರಿ 2024, 15:54 IST
ಅಕ್ಷರ ಗಾತ್ರ

ಬ್ರಿಸ್ಬೇನ್ (ಆಸ್ಟ್ರೇಲಿಯಾ): ಅಗ್ರ ಶ್ರೇಯಾಂಕಿತ ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು 6-0, 6-3 ಸೆಟ್ ಗಳಿಂದ ಸೋಲಿಸುವ ಮೂಲಕ ಎಲೆನಾ ರಿಬಾಕಿನಾ ಅವರು ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೂರ್ನಿ ಪ್ರಶಸ್ತಿಯನ್ನು ಗೆದ್ದರು. ಇದು ಅವರ ವೃತ್ತಿಜೀವನದ ಆರನೇ ಪ್ರಶಸ್ತಿ. 

ನಾಲ್ಕನೇ ಶ್ರೇಯಾಂಕದ ರಿಬಾಕಿನಾ ವಿರುದ್ಧ ತನ್ನ ಹಿಂದಿನ ಏಳು ಪಂದ್ಯಗಳಲ್ಲಿ ಐದನ್ನು ಗೆದ್ದಿದ್ದ ಸಬಲೆಂಕಾಗೆ, ಭಾನುವಾರ ವಿಶ್ವದ 4ನೇ ಶ್ರೇಯಾಂಕದ ಆಟಗಾರ್ತಿಯ ಪ್ರಬಲ ಹೊಡೆತಗಳಿಗೆ ತಕ್ಕ ಉತ್ತರ ಇರಲಿಲ್ಲ. ಫೈನಲ್‌ ಪಂದ್ಯದಲ್ಲಿ ರಿಬಾಕಿನಾ ಪ್ರಾಬಲ್ಯ ಸಾಧಿಸಿದರು. ಮುಂಬರುವ ಆಸ್ಟ್ರೇಲಿಯನ್ ಓಪನ್‌ಗೆ ನೆಚ್ಚಿನ ಆಟಗಾರ್ತಿಯರಲ್ಲಿ ಒಬ್ಬರೆಂದು ಸಾಬೀತುಪಡಿಸಿದರು. 

ವರ್ಷದ ಹಿಂದೆ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನೇರ ಸೆಟ್‌ಗ‌ಳಿಂದ ರಿಬಾಕಿನಾ ಅವರನ್ನು ಸಬಲೆಂಕಾ ಸೋಲಿಸಿದ್ದರು.

ಸಬಲೆಂಕಾ ಒಂಬತ್ತನೇ ಗೇಮ್‌ನಲ್ಲಿ ಸರ್ವ್ ಬ್ರೇಕ್ ಮಾಡಿ ಪಾಯಿಂಟ್‌ ಗಳಿಸಿದರು. ಆದರೆ ರಿಬಾಕಿನಾ ಎರಡನೇ ಗೇಮ್‌ನಲ್ಲಿ 3-1 ಮುನ್ನಡೆ ಸಾಧಿಸಿದರು. ಆ ಬಳಿಕ ಹಿಂದಿರುಗಿ ನೋಡಲಿಲ್ಲ.

ಪಂದ್ಯದ ಹನ್ನೊಂದನೇ ಗೇಮ್‌ನಲ್ಲಿ ಸಬಲೆಂಕಾ ಮೊದಲ ಬಾರಿಗೆ ಸರ್ವ್ ಮಾಡಿದರು. ಅಷ್ಟರಲ್ಲಿ ರಿಬಾಕಿನಾ ಸರ್ವ್ ಬ್ರೇಕ್ ಮಾಡಿ ಗೆಲುವಿನತ್ತ ಸಾಗಿದರು. ಸಬಲೆಂಕಾ ಆಕ್ರಮಣಕಾರಿ ಫೋರ್‌ಹ್ಯಾಂಡ್‌ ಹೊಡೆತಗಳನ್ನು ಪ್ರದರ್ಶಿಸಿದರು. 

24 ವರ್ಷದ ವೃತ್ತಿಜೀವನದಲ್ಲಿ ರಿಬಾಕಿನಾಗೆ ಆರನೇ ಪ್ರಶಸ್ತಿಯಾಗಿದೆ ಮತ್ತು ಕಳೆದ ವರ್ಷ ಇಂಡಿಯಾನ ವೇಲ್ಸ್ ನಂತರ ಮೊದಲ ಪ್ರಶಸ್ತಿಯಾಗಿದೆ.

‘ನಾವು ಮೆಲ್ಬರ್ನ್‌ನಲ್ಲಿ ಭೇಟಿಯಾಗುತ್ತೇವೆ ಎಂದು ಭಾವಿಸುತ್ತೇವೆ. ಸ್ಕೋರ್ ಹೊರತಾಗಿಯೂ, ನಿಮ್ಮ ವಿರುದ್ಧ ಆಡುವುದು ಯಾವಾಗಲೂ ಕಠಿಣವಾಗಿದೆ’ ಎಂದು ರಿಬಾಕಿನಾ ಪಂದ್ಯದ ಬಳಿಕ ಹೇಳಿದರು. 

ಈ ಸೋಲಿನೊಂದಿಗೆ ಆಸ್ಟ್ರೇಲಿಯಾದ ನೆಲದಲ್ಲಿ ಸಬಲೆಂಕಾ ಅವರ 15 ಗೆಲುವುಗಳ ಸರಣಿ ಕೊನೆಗೊಂಡಿತು. 

ಗ್ರಿಗೊರ್‌ ಡಿಮಿಟ್ರೋವ್‌ಗೆ ಪ್ರಶಸ್ತಿ: ‍ಪುರುಷರ ಫೈನಲ್‌ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಗ್ರಿಗರ್‌ ಡಿಮಿಟ್ರೋವ್‌ ಅವರು ಅಗ್ರ ಶ್ರೇಯಾಂಕದ ಹೋಲ್ಗರ್ ರೂನ್‌ ಅವರನ್ನು 7-6 (5), 6-4 ಸೆಟ್‌ಗಳಿಂದ ಸೋಲಿಸಿದರು.

2 ಗಂಟೆ 13 ನಿಮಿಷ  ನಡೆದ ಪಂದ್ಯದಲ್ಲಿ ಡಿಮಿಟ್ರೋವ್ ಕೌಶಲಭರಿತ ಆಟ ಪ್ರದರ್ಶಿಸಿದರು. 14ನೇ ಶ್ರೇಯಾಂಕಿತ ಆಟಗಾರ ಡಿಮಿಟ್ರೋವ್ ವೃತ್ತಿಜೀವನದ ಒಂಬತ್ತನೇ ಪ್ರಶಸ್ತಿ ಹಾಗೂ 2017ರ ಎಟಿಪಿ ಫೈನಲ್ಸ್ ಬಳಿಕ ಇದೇ ಮೊದಲ ಬಾರಿಗೆ ಟ್ರೋಫಿ ಜಯಿಸಿದ್ದಾರೆ. 

ಮೊದಲ ಸೆಟ್‌ನ ಮೂರನೇ ಗೇಮ್ ನಿಕಟ ಹೋರಾಟದ ಸೂಚಕವಾಗಿತ್ತು. 32 ವರ್ಷದ ಡಿಮಿಟ್ರೋವ್ ಎರಡನೇ ಸೆಟ್ ನ ಎಂಟನೇ ಗೇಮ್ ನಲ್ಲಿ ರೂನ್ ಅವರನ್ನು ಸೋಲಿಸಿ 4-3ರಲ್ಲಿ ಮುನ್ನಡೆ ಸಾಧಿಸಿದರು.  

ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೋವ್‌.

ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೋವ್‌.

ಪಿಟಿಐ ಚಿತ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT