ಸೋಮವಾರ, ಮೇ 23, 2022
22 °C
ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್ ಚಾಂಪಿಯನ್‌ಷಿಪ್‌

ಚಾಂಪಿಯನ್‌ಷಿಪ್‌: ಸೆಹಜ್‌ಗೆ ವೇದಾಂಶ್ ಎದುರಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸೆಹಜ್ ಸಿಂಗ್ ಪವಾರ್ ಹಾಗೂ ವೇದಾಂಶ್ ರೆಡ್ಡಿಯರ್‌ ಅವರು ಎಐಟಿಎ ಸಿಎಸ್‌7 18 ವರ್ಷದೊಳಗಿನವರ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದಾರೆ.

ಫಾರ್ಚುನ್ ಸ್ಪೋರ್ಟ್ಸ್ ಅಕಾಡೆಮಿ ಅಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಶುಕ್ರವಾರ ಸೆಹಜ್‌ 7–3ರಿಂದ ಚರಣ್ ವರ್ಧಮ್ ಅವರ ಸವಾಲು ಮೀರಿದರೆ, ವೇದಾಂಶ್‌ 7–1ರಿಂದ ಅಕ್ಷಯ್ ಪ್ರಸಾದ್ ಅವರನ್ನು ಮಣಿಸಿದರು.

ಬಾಲಕಿಯರ ವಿಭಾಗದಲ್ಲಿ ಚಾರ್ಮಿ ಗೋಪಿನಾಥ್ ಹಾಗೂ ವನ್ಯಾ ಶ್ರೀವಾತ್ಸವ್ ಫೈನಲ್‌ನಲ್ಲಿ ಸೆಣಸಲಿದ್ದಾರೆ.

ನಾಲ್ಕರ ಘಟ್ಟದ ಪಂದ್ಯದಲ್ಲಿ ಚಾರ್ಮಿ 7–1ರಿಂದ ಕಶೀಶ್ ಕಾಂತ್ ಎದುರು ಗೆದ್ದರೆ, ವನ್ಯಾ 7–3ರಿಂದ ಅನುಷ್ಕಾ ಪಾವನಿ ಅವರನ್ನು ಸೋಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು