ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ ಅಂಕಣಕ್ಕೆ ಮರಳಿದ ಸೆರೆನಾ

Last Updated 22 ಜೂನ್ 2022, 15:50 IST
ಅಕ್ಷರ ಗಾತ್ರ

ಈಸ್ಟ್‌ಬಾರ್ನ್: ದೀರ್ಘ ಬಿಡುವಿನ ನಂತರ ಟೆನಿಸ್ ಅಂಕಣಕ್ಕೆ ಮರಳಿದ ಸೆರೆನಾ ವಿಲಿಯಮ್ಸ್‌ ಜಯದ ಆರಂಭ ಮಾಡಿದರು.

ಮಂಗಳವಾರ ಇಲ್ಲಿ ನಡೆದ ಈಸ್ಟ್‌ಬಾರ್ನ್ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಸೆರೆನಾ ಮತ್ತು ಆನ್ಸ್ ಜುಬೇರ್ ಅವರೊಂದಿಗೆ 2-6, 6-3, 13-11 ರಲ್ಲಿ ಸಾರಾ ಸೊರಿಬಸ್ ಮತ್ತು ಮಾರಿ ಬುಜ್‌ಕೊವಾ ಜೋಡಿಯನ್ನು ಮಣಿಸಿದರು. ಟೂರ್ನಿಯ ಎಂಟರ ಘಟ್ಟ ಪ್ರವೇಶಿಸಿದರು.

23 ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿರುವ ದಾಖಲೆಯ ಒಡತಿ ಸೆರೆನಾ ಹೋದ ವರ್ಷದ ವಿಂಬಲ್ಡನ್ ನಂತರ ಕಣಕ್ಕಿಳಿದಿರಲಿಲ್ಲ. ಆ ಟೂರ್ನಿಯಲ್ಲಿ ಅವರು ಗಾಯಗೊಂಡು ಹೊರನಡೆದಿದ್ದರು.

40 ವರ್ಷದ ಸೆರೆನಾ ಅವರು ತಾವು ವೃತ್ತಿಪರ ಟೆನಿಸ್‌ಗೆ ಮರಳುವ ಕುರಿತು ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದರು. ಅದಕ್ಕೂ ಮುನ್ನ ಅವರು ಟೆನಿಸ್‌ನಿಂದ ನಿವೃತ್ತಿಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.

ಇದೇ 27ರಂದು ವಿಂಬಲ್ಡನ್ ಶುರುವಾಗಲಿದೆ. ಈ ಹೊತ್ತಿನಲ್ಲಿ ಸೆರೆನಾ ಕಣಕ್ಕೆ ಮರಳಿರುವುದು ಟೆನಿಸ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಸೆರೆನಾ ಮತ್ತು ಟ್ಯುನಿಷಿಯಾದ ಜೆಬೇರ್ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT