ಬುಧವಾರ, ಮೇ 18, 2022
29 °C
ಯಾರಾ ವ್ಯಾಲಿ ಕ್ಲಾಸಿಕ್ ಟೆನಿಸ್ ಟೂರ್ನಿ: ಆ್ಯಷ್ಲೆ ಬಾರ್ಟಿ ಮುನ್ನಡೆ

ಕ್ವಾರ್ಟರ್ ‌ಫೈನಲ್‌ಗೆ ಸೆರೆನಾ ವಿಲಿಯಮ್ಸ್

ಎಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್‌ಗೆ ಅಮೆರಿಕಾದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಭರ್ಜರಿಯಾಗಿಯೇ ಸಿದ್ಧತೆ ನಡೆಸಿದ್ದಾರೆ. ಸದ್ಯ ಯಾರಾ ವ್ಯಾಲಿ ಕ್ಲಾಸಿಕ್ ಟೂರ್ನಿಯಲ್ಲಿ ಆಡುತ್ತಿರುವ ಅವರು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

23 ಬಾರಿ ಗ್ರ್ಯಾನ್‌ಸ್ಲಾಮ್ ಕಿರೀಟ ಧರಿಸಿರುವ ಸೆರೆನಾ, ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಹಣಾಹಣಿಯಲ್ಲಿ 6–1, 6–4ರಿಂದ ಸ್ವೇತಾನ ಪಿರೊಂಕೊವಾ ಅವರನ್ನು ಸೋಲಿಸಿದರು.

ಕಳೆದ ವರ್ಷದ ಅಮೆರಿಕ ಓಪನ್ ಟೂರ್ನಿಯಲ್ಲಿ ಪಿರೊಂಕೊವಾ ಅವರನ್ನು ಮಣಿಸಲಿ ಸೆರೆನಾ ಪ್ರಯಾಸಪಟ್ಟಿದ್ದರು. ಆ ಬಳಿಕ ನಡೆದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪಿರೊಂಕೊವಾ ಎದುರು ಆಡಬೇಕಿದ್ದ ಅವರು ಗಾಯದ ಕಾರಣ ಹಿಂದೆ ಸರಿದಿದ್ದರು.

ಎಂಟರ ಘಟ್ಟಕ್ಕೆ ಆ್ಯಷ್ಲೆ ಬಾರ್ಟಿ: ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ ಕೂಡ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಅವರು 6–0, 4–6, 6–3ರಿಂದ ಜೆಕ್‌ ಗಣರಾಜ್ಯದ ಮರಿಯಾ ಬೌಜ್‌ಕೊವಾ ಅವರನ್ನು ಸೋಲಿಸಿದರು.

ಮುಂದಿನ ಪಂದ್ಯದಲ್ಲಿ ಬಾರ್ಟಿ ಅವರು ಅಮೆರಿಕದ ಶೆಲ್ಬಿ ರೋಜರ್ಸ್‌ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಓಪನ್ ಹಾಲಿ ಚಾಂಪಿಯನ್‌, ಅಮೆರಿಕದ ಸೋಫಿಯಾ ಕೆನಿನ್‌ 5–7, 7–5, 6–2ರಿಂದ ಜೆಸ್ಸಿಕಾ ಪೆಗುಲಾ ಅವರನ್ನು ಪರಾಭವಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು