ಗುರುವಾರ , ನವೆಂಬರ್ 21, 2019
20 °C

ಟೆನಿಸ್‌: ಫೈನಲ್‌ ಪ್ರವೇಶಿಸಿದ ವಾವ್ರಿಂಕ

Published:
Updated:
Prajavani

ಆ್ಯಂಟ್‌ವರ್ಪ್‌, ಬೆಲ್ಜಿಯಂ: ಇಟಲಿಯ ಯುವ ಆಟಗಾರ ಜಾನಿಕ್‌ ಸಿನ್ನರ್‌ ಅವರನ್ನು ಸೋಲಿಸಿದ ಸ್ಟಾನಿಸ್ಲಾಸ್‌ ವಾವ್ರಿಂಕ, ಯುರೋಪಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ವಾವ್ರಿಂಕ 6–3, 6–2 ನೇರ ಸೆಟ್‌ಗಳಿಂದ ಗೆದ್ದರು.

ಸಿನ್ನರ್‌, 2014ರ ನಂತರ ಎಟಿಪಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅತೀ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾಗಿದ್ದರು.

34 ವರ್ಷ ವಯಸ್ಸಿನ ವಾವ್ರಿಂಕ ಮತ್ತು 18 ವರ್ಷದ ಸಿನ್ನರ್‌ ನಡುವಣ ಈ ಪೈಪೋಟಿ 1 ಗಂಟೆ 59 ನಿಮಿಷ ನಡೆಯಿತು.

ಪ್ರತಿಕ್ರಿಯಿಸಿ (+)