ಗುರುವಾರ , ಏಪ್ರಿಲ್ 9, 2020
19 °C

ರ‍್ಯಾಂಕಿಂಗ್‌: ಅಗ್ರ 50ರೊಳಗೆ 15ರ ಗಫ್‌

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಅಮೆರಿಕದ 15ರ ಬಾಲೆ ಕೊಕೊ ಗಫ್‌ ಡಬ್ಲ್ಯುಟಿಎ ಟೆನಿಸ್‌ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ ಅಗ್ರ 50ರೊಳಗಿನ ಸ್ಥಾನ ಪ್ರವೇಶಿಸಿದ್ದಾರೆ. ಇದರೊಂದಿಗೆ 15 ವರ್ಷಗಳ ಬಳಿಕ ಈ ರೀತಿಯ ಸಾಧನೆ ಮಾಡಿದ ಟೆನಿಸ್‌ ಪಟು ಎನಿಸಿದರು. ಸೋಮವಾರ ಪ್ರಕಟವಾದ ರ‍್ಯಾಂಕಿಂಗ್‌ನಲ್ಲಿ ಗಫ್‌ 49ನೇ ಸ್ಥಾನದಲ್ಲಿದ್ದರು.

2005ರ ಆಗಸ್ಟ್‌ನಲ್ಲಿ ಬಲ್ಗೇರಿಯಾದ ಸೆಸಿಲ್‌ ಕರಟಾಂಚೆವಾ ತಮ್ಮ 15ನೇ ವಯಸ್ಸಿನಲ್ಲಿ 50ರ ರ‍್ಯಾಂಕಿಂಗ್‌ ಗಡಿ ಪ್ರವೇಶಿಸಿದ್ದರು.

ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಮೊದಲ ಬಾರಿ ಕಣಕ್ಕಿಳಿದಿದ್ದ ಫ್ಲೊರಿಡಾ ಮೂಲದ ಆಟಗಾರ್ತಿ ಗಫ್‌, ನಾಲ್ಕನೇ ಸುತ್ತಿಗೆ ತಲುಪಿದ್ದರು. ಹೋದ ವರ್ಷದ ಜುಲೈನಲ್ಲಿ ಅಮೆರಿಕ ಓಪನ್‌ ಟೂರ್ನಿಯಲ್ಲಿ ವೀನಸ್‌ ವಿಲಿಯಮ್ಸ್‌ ಅವರನ್ನು ಮಣಿಸಿದಾಗಿನಿಂದ ಅವರು ಸುದ್ದಿಯಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು