ಜಪಾನ್ ಆಟಗಾರ್ತಿ ಒಸಾಕ, ಆಸ್ಟ್ರೇಲಿಯ ಓಪನ್ ನಂತರ ಮೊದಲ ಬಾರಿ ಟೂರ್ನಿಯೊಂದರ ಪ್ರಶಸ್ತಿ ಸುತ್ತು ತಲುಪಿದರು. ಫೈನಲ್ ಪಂದ್ಯದಲ್ಲಿ ಅವರಿಗೆ ರಷ್ಯಾದ ಅನಸ್ತಾಸಿಯಾ ಪಾಲ್ವಿಚೆಂಕೊವಾ ಸವಾಲು ಎದುರಾಗಿದೆ. ಇನ್ನೊಂದೆಡೆ ಅನಸ್ತಾಸಿಯಾ ಅವರು ಜರ್ಮನಿಯ ಅಂಜೆಲಿಕ್ ಕೆರ್ಬರ್ ಅವರನ್ನು 6–3, 6–3ರಿಂದ ಸೋಲಿಸಿ ಅಂತಿಮ ಸುತ್ತಿಗೆ ಕಾಲಿಟ್ಟರು.