ಸೋಮವಾರ, ನವೆಂಬರ್ 18, 2019
23 °C

ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಕ್ವಾರ್ಟರ್‌ಗೆ ಬೋಪಣ್ಣ–ಡೆನಿಸ್‌

Published:
Updated:

ಪ್ಯಾರಿಸ್‌: ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಡೆನಿಸ್‌ ಶಪೊವಲೊವ್‌ ಅವರು ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರವಾರ ನಡೆದ ಪಂದ್ಯದಲ್ಲಿ ಬೋಪಣ್ಣ–ಡೆನಿಸ್‌ ಜೋಡಿಯು, ಅಮೆರಿಕ–ಅರ್ಜಂಟೈನಾದ ಮ್ಯಾನುಯೆಲ್ ಗೊಂಜಾಲೆಜ್-ಆಸ್ಟಿನ್ ಕ್ರಾಜಿಸೆಕ್‌ ಎದುರು 6–1, 6–3 ನೇರ ಸೆಟ್‌ಗಳಿಂದ ಜಯ ಸಾಧಿಸಿತು.

ಸೆಮಿಫೈನಲ್‌ ಪ್ರವೇಶಕ್ಕಾಗಿ ಶುಕ್ರವಾರ ನಡೆಯುವ ಹಣಾಹಣಿಯಲ್ಲಿ ರಷ್ಯಾದ ಕರೆನ್‌ ಕಚನೊವ್‌ ಮತ್ತು ಆ್ಯಂಡ್ರೆ ರುಬ್ಲೇವ್‌ ಎದುರು ಬೋಪಣ್ಣ–ಡೆನಿಸ್‌ ಸೆಣಸಲಿದ್ದಾರೆ.

ಪ್ರತಿಕ್ರಿಯಿಸಿ (+)