ಭಾನುವಾರ, ಅಕ್ಟೋಬರ್ 24, 2021
25 °C
ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿ

ಟೆನಿಸ್‌ ಟೂರ್ನಿ: ಸೆಹಜ್‌, ಸುಶ್ಮಿತಾಗೆ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸೆಹಜ್ ಸಿಂಗ್‌ ಹಾಗೂ ಸುಶ್ಮಿತಾ ರವಿ ಅವರು ಎಐಟಿಎ ಸಿಎಸ್‌7 14 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಕೆಎಸ್‌ಎಲ್‌ಟಿಎ ಆಶ್ರಯದಲ್ಲಿ ನಡೆದ ಟೂರ್ನಿಯ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಶುಕ್ರವಾರ ಸೆಹಜ್‌ ಅವರು ಲೀತಾಯಿಶ್ ಸವಾಲು ಮೀರಿದರು. ಅವರಿಗೆ 6-2, 6-3ರಿಂದ ಗೆಲುವು ಒಲಿಯಿತು. ಬಾಲಕಿಯರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸುಶ್ಮಿತಾ 6-3, 6-3ರಿಂದ ಕಾಶ್ವಿ ಸುನಿಲ್ ಎದುರು ಗೆದ್ದು ಬೀಗಿದರು.

ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಸೆಹಜ್ ಆರಂಭದಿಂದಲೇ ಮುನ್ನಡೆ ಸಾಧಿಸಿದರು. 3–0ಯಿಂದ ಮುನ್ನಡೆದ ಅವರು ಎಂಟನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು ಮೊದಲ ಸೆಟ್ ಜಯಿಸಿದರು. ಅದೇ ಲಯದಲ್ಲಿ ಮುಂದುವರಿದು ಎರಡನೇ ಸೆಟ್‌ನೊಂದಿಗೆ ಜಯವನ್ನೂ ಒಲಿಸಿಕೊಂಡರು.

ಲೀತಾಯಿಶ್ ಹಾಗೂ ಕಾಶ್ವಿ ಅವರು ಸಿಂಗಲ್ಸ್ ವಿಭಾಗಗಳಲ್ಲಿ ಅನುಭವಿಸಿದ್ದ ನಿರಾಸೆಯನ್ನು ಡಬಲ್ಸ್‌ನಲ್ಲಿ ಜಯಿಸುವುದರ ಮೂಲಕ ಮರೆತರು.

ಬಾಲಕರ ಡಬಲ್ಸ್‌ನಲ್ಲಿ ಲೀತಾಯಿಶ್–ನಿಖಿಲ್ ಶ್ರೀನಿವಾಸ್ ಜೋಡಿಯು 7-5, 6-2ರಿಂದ ನಿಹಾರ್ ಹಾಗೂ ಶೌರ್ಯ ಬಿ. ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು. ಬಾಲಕಿಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಕಾಶ್ವಿ–ಸಾನ್ವಿ ಮಿಶ್ರಾ ಅವರು  4-6, 6-3, 6-4ರಿಂದ ಪಾರ್ಥಸಾರಥಿ ಮುಂಡೆ–ಲಕ್ಷಿತಾ ಗೋಪಿನಾಥ್ ಅವರನ್ನು ಮಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.