ಹೋಬರ್ಟ್: ಎರಡು ವರ್ಷದ ವಿರಾಮದ ಬಳಿಕ ಅಂಗಣಕ್ಕಿಳಿದಿದ್ದ ಭಾರತದ ಸಾನಿಯಾ ಮಿರ್ಜಾ ಮೋಡಿ ಮಾಡಿದರು. ಹೋಬರ್ಟ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಶನಿವಾರ ಅವರು ಪ್ರಶಸ್ತಿಗೆ ಮುತ್ತಿಕ್ಕಿದರು.

ಫೈನಲ್ ಪಂದ್ಯದಲ್ಲಿ ಶ್ರೇಯಾಂಕರಹಿತ ಜೋಡಿ ಸಾನಿಯಾ ಹಾಗೂ ಉಕ್ರೇನ್‌ನ ನಾದಿಯಾ ಕಿಚೆನೊಕ್ ಅವರು ಎರಡನೇ ಶ್ರೇಯಾಂಕದ ಚೀನಾದ ಶುಯಿ ಪೆಂಗ್–ಶುಯಿ ಜಂಗ್ ಎದುರು 6–4, 6–4ರಿಂದ ಜಯದ ನಗೆ ಬೀರಿದರು. ಒಂದು ತಾಸು 21 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ಪುತ್ರ ಇಜಾನ್‌ಗೆ ಜನ್ಮ ನೀಡಿದ ಬಳಿಕ ಸಾನಿಯಾ ಆಡಿದ ಮೊದಲ ಟೂರ್ನಿ ಇದು. ಇಲ್ಲಿನ ಜಯದೊಂದಿಗೆ 33 ವರ್ಷದ ಹೈದರಾಬಾದ್ ಆಟಗಾರ್ತಿ ಆಸ್ಟ್ರೇಲಿಯನ್ ಓಪನ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿದರು. ಸಾನಿಯಾ ಮುಡಿಗೇರಿದ 42ನೇ ಡಬ್ಲ್ಯುಟಿಎ ಡಬಲ್ಸ್ ಗರಿ ಇದು. 2017ರಲ್ಲಿ ಬ್ರಿಸ್ಬೇನ್ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಅಮೆರಿಕದ ಬೆಥನಿ ಮ್ಯಾಟ್ಟೆಕ್ ಜೊತೆಗೂಡಿ ಕೊನೆಯ ಬಾರಿ ಟ್ರೋಫಿ ಗೆದ್ದಿದ್ದರು.

ಪಾಕಿಸ್ತಾನ ಕ್ರಿಕೆಟಿಗ ಶೊಯಬ್ ಮಲಿಕ್ ಅವರನ್ನು ವರಿಸಿರುವ ಸಾನಿಯಾ 2018 ಹಾಗೂ 2019ರಲ್ಲಿ ಟೆನಿಸ್‌ನಿಂದ ದೂರ ಇದ್ದರು.

ಜಿದ್ದಾಜಿದ್ದಿ ಪೈಪೋಟಿ: ಸಾನಿಯಾ ಜೋಡಿಯು ಫೈನಲ್ ಹಣಾಹಣಿಯ ಮೊದಲ ಗೇಮ್‌ನಲ್ಲಿ ಚೀನಾ ಆಟಗಾರ್ತಿಯರ ಸರ್ವ್ ಮುರಿದರು. ಬಳಿಕ ಸೆಟ್ 4–4 ಸಮಬಲದತ್ತ ಸಾಗಿತ್ತು. ಬಳಿಕ ಎರಡು ಗೇಮ್‌ಗಳಲ್ಲಿ ಜಯದ ನಗೆ ಬೀರಿದ ಭಾರತ–ಉಕ್ರೇನ್ ಜೋಡಿ ಸೆಟ್ ವಶಪಡಿಸಿಕೊಂಡಿತು.

ಎರಡನೇ ಸೆಟ್ ಕೂಡ ಜಿದ್ದಾಜಿದ್ದಿಯಿಂದ ಕೂಡಿತ್ತು. ಸಾನಿಯಾ ಹಾಗೂ ನಾದಿಯಾ 4–2 ಮುನ್ನಡೆ ಪಡೆದಿದ್ದರು. ತಿರುಗೇಟು ನೀಡಿದ ಎದುರಾಳಿಗಳು 4–4 ಸಮಬಲ ಸಾಧಿಸಿದರು. ಛಲಬಿಡದ ಭಾರತ–ಉಕ್ರೇನ್ ಆಟಗಾರ್ತಿಯರು ಮತ್ತೆರಡು ಗೇಮ್‌ಗಳಲ್ಲಿ ಗೆದ್ದು ಸೆಟ್ ಜೊತೆಗೆ ಟ್ರೋಫಿಯನ್ನೂ ತಮ್ಮದಾಗಿಸಿಕೊಂಡರು.

ಸಾನಿಯಾ ಹಾಗೂ ನಾದಿಯಾ ಸುಮಾರು ₹ 9 ಲಕ್ಷ 60 ಸಾವಿರ (13,580 ಅಮೆರಿಕನ್ ಡಾಲರ್) ಬಹುಮಾನ ಮೊತ್ತವನ್ನು ಹಂಚಿಕೊಂಡರು. ಅಲ್ಲದೆ ತಲಾ 280 ರ‍್ಯಾಂಕಿಂಗ್ ಪಾಯಿಂಟ್‌ಗಳನ್ನು ಗಳಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.