ಭಾನುವಾರ, ಆಗಸ್ಟ್ 1, 2021
27 °C

ಆರೋಗ್ಯ ಕಾರ್ಯಕರ್ತರಿಗೆ ವಿಂಬಲ್ಡನ್‌ನಿಂದ ಸ್ಟ್ರಾಬೆರಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ವಿಂಬಲ್ಡನ್ ಸಂಘಟಿಸುವ ಆಲ್‌ ಇಂಗ್ಲೆಂಡ್ ಕ್ಲಬ್‌, ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ ಸ್ಟ್ರಾಬೆರಿಯನ್ನು ಉಚಿತವಾಗಿ ಹಂಚಲಿದೆ.

ಟೂರ್ನಿಯಲ್ಲಿ  26000 ಸ್ಟ್ರಾಬೆರಿಗಳನ್ನು ನೀಡಲು ಉದ್ದೇಶಿಸಿತ್ತು.ಆದರೆ ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ವಿಂಬಲ್ಡನ್ ಟೆನಿಸ್ ಟೂರ್ನಿ ರದ್ದಾಗಿದೆ.  

’ನಮ್ಮ ಕ್ಲಬ್‌ನಿಂದ ಇದೊಂದು ಸಣ್ಣ ಕಾಣಿಕೆಯಾಗಿದೆ. ರಾಷ್ಟ್ರೀಯ ಆರೋಗ್ಯ ಕಾರ್ಯಕರ್ತರು ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರಿಗೆ ನಮ್ಮ ಬೆಂಬಲ ವ್ಯಕ್ತಪಡಿಸುವ ರೀತಿ ಇದಾಗಿದೆ‘ ಎಂದು ವಿಂಬಲ್ಡನ್ ಆಯೋಜಕರು ಹೇಳಿದ್ದಾರೆ.

ಪ್ರತಿದಿನ 200 ಪೊಟ್ಟಣಗಳನ್ನು ನೀಡಲು ಉದ್ದೇಶಿಸಲಾಗಿದೆ.  ಟೆನಿಸ್ ಟೂರ್ನಿ ಮತ್ತು ಸ್ಟ್ರಾಬೆರಿ ನಡುವಿನ ಸಂಬಂಧ ಹಳೆಯದು. ಇಲ್ಲಿ ಟೂರ್ನಿ ನಡೆಯುವ ಬೇಸಿಗೆ ಋತುವಿನಲ್ಲಿಯೇ ಸ್ಟ್ರಾಬೆರಿ ಫಸಲು ಕೂಡ ಇರುತ್ತದೆ. ಆದ್ದರಿಂದ ಈ ನಂಟು ಬೆಸೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು