ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup | ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಭಾರತೀಯ ಕ್ರಿಕೆಟಿಗ: ವಾರ್ನರ್

Published 21 ಅಕ್ಟೋಬರ್ 2023, 5:10 IST
Last Updated 21 ಅಕ್ಟೋಬರ್ 2023, 5:10 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್‌ ಬ್ಯಾಟರ್‌ ಡೇವಿಡ್‌ ವಾರ್ನರ್‌ ಅವರು ವಿರಾಟ್ ಕೊಹ್ಲಿ ಅವರನ್ನು ತಮ್ಮಿಷ್ಟದ ಭಾರತೀಯ ಕ್ರಿಕೆಟಿಗ ಎಂದು ಹೇಳಿದ್ದಾರೆ.

ಸದ್ಯ ಕ್ರಿಕೆಟ್‌ ಜಗತ್ತಿನ ಸೂಪರ್‌ಸ್ಟಾರ್‌ ಎನಿಸಿರುವ ಕೊಹ್ಲಿ ತಮ್ಮ ಬ್ಯಾಟಿಂಗ್‌ ಕೌಶಲ, ಕ್ರಿಕೆಟ್‌ ಬಗೆಗಿನ ಅಪಾರವಾದ ಆಸಕ್ತಿ ಹಾಗೂ ಬದ್ಧತೆ, ಮೈದಾನದಲ್ಲಿನ ಆಕ್ರಮಣಕಾರಿ ಆಟ ಮತ್ತು ಫಿಟ್‌ನೆಸ್‌ ವಿಚಾರಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಮಾತನಾಡಿರುವ ವಾರ್ನರ್‌, ಸದ್ಯ ಭಾರತ ತಂಡದಲ್ಲಿರುವ ನನ್ನ ನೆಚ್ಚಿನ ಆಟಗಾರ ವಿರಾಟ್‌ ಕೊಹ್ಲಿ ಎಂದು ಹೇಳಿದ್ದಾರೆ. ಜೊತೆಗೆ, ಕೊಹ್ಲಿಯ ಕ್ರಿಕೆಟ್‌ ಕೌಶಲ ಮತ್ತು ನಾಯಕತ್ವ ಗುಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಇಬ್ಬರು ಕ್ರೀಡಾಂಗಣದಲ್ಲಿ ಬದ್ಧ ಎದುರಾಳಿಗಳಾಗಿ ಸೆಣಸಾಡಿದರೂ, ಮೈದಾನದಾಚೆ ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಮಿಂಚಿದ ವಾರ್ನರ್
ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವಾರ್ನರ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯವನ್ನು ಆಸ್ಟ್ರೇಲಿಯಾ 62 ರನ್ ಅಂತರದಿಂದ ಗೆದ್ದುಕೊಂಡಿತು.

ವಾರ್ನರ್‌ ಹಾಗೂ ಮಿಚೆಲ್ ಮಾರ್ಷ್‌ ಜೋಡಿ ಮೊದಲ ವಿಕೆಟ್‌ಗೆ 259 ರನ್‌ ಕಲೆಹಾಕಿತು. ಇದು ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಬಂದ ದಾಖಲೆಯ ಜೊತೆಯಾಟ ಎನಿಸಿತು.

ಮಾರ್ಷ್‌ 121 ರನ್‌ ಗಳಿಸಿದರೆ, ವಾರ್ನರ್‌ 163 ರನ್‌ ಬಾರಿಸಿದರು. ಇವರ ಆಟದ ಬಲದಿಂದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 367 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಪಾಕಿಸ್ತಾನ 45.3 ಓವರ್‌ಗಳಲ್ಲಿ 305 ರನ್ ಗಳಿಸಿ ಆಲೌಟ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT