ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023: ರಚಿನ್ ಶತಕ, ವಿಲಿಮಯ್ಸನ್ ಅರ್ಧ ಶತಕ, ಪಾಕ್‌ಗೆ 402 ರನ್ ಗುರಿ

Published 4 ನವೆಂಬರ್ 2023, 5:04 IST
Last Updated 4 ನವೆಂಬರ್ 2023, 5:04 IST
ಅಕ್ಷರ ಗಾತ್ರ

ಬೆಂಗಳೂರು: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಶನಿವಾರ) ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 401 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ರಚಿನ್ ರವೀಂದ್ರ ಶತಕ (108) ಸಿಡಿಸಿ ಸಂಭ್ರಮಿಸಿದರೆ, ಕೇನ್‌ ವಿಲಿಯಮ್ಸನ್‌ 95, ಗ್ಲೆನ್‌ ಫಿಲಿಪ್ಸ್‌ 41, ಮಾರ್ಕ್ ಚಾಪ್ಮನ್‌ 39, ಡೆವಾನ್‌ ಕಾನ್ವೆ 35, ಡೇರಿಲ್‌ ಮಿಚೆಲ್ 29, ಮಿಚೆಲ್‌ ಸ್ಯಾಂಟ್ನರ್‌ ಔಟಾಗದೆ 26 ರನ್ ತಂಡಕ್ಕೆ ಆಸರೆಯಾದರು.

ಪಾಕ್‌ ಪರ ಮೊಹಮ್ಮದ್‌ ವಸೀಮ್, ಹ್ಯಾರಿಸ್ ರವೂಫ್‌, ಇಫ್ತಿಕಾರ್ ಅಹಮದ್, ಹಸನ್ ಅಲಿ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಸತತ ನಾಲ್ಕು ಗೆಲುವುಗಳ ಬಳಿಕ ಎದುರಾದ ‘ಹ್ಯಾಟ್ರಿಕ್’ ಸೋಲಿನಿಂದ ಕಂಗೆಟ್ಟಿರುವ ನ್ಯೂಜಿಲೆಂಡ್‌ ತಂಡ ಒಂದೆಡೆಯಾದರೆ, ಏಳು ಪಂದ್ಯಗಳಿಂದ ಕೇವಲ ಆರು ಪಾಯಿಂಟ್ಸ್ ಸಂಗ್ರಹಿಸಿರುವ ಪಾಕಿಸ್ತಾನ ತಂಡ ಮತ್ತೊಂದೆಡೆ.

ಇಂದಿನ ‘ಮಾಡು–ಮಡಿ’ ಪಂದ್ಯದಲ್ಲಿ ಇವೆರಡು ತಂಡಗಳಿಗೆ ಸೆಮಿಫೈನಲ್‌ ಪ್ರವೇಶದ ಸಾಧ್ಯತೆ ಜೀವಂತವಾಗಿರಿಸಿಕೊಳ್ಳಲು ಗೆಲುವು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT