ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಆಟಗಾರರ ವಿರುದ್ಧ ಪ್ರೇಕ್ಷಕರ ಅನುಚಿತ ವರ್ತನೆ: ಐಸಿಸಿಗೆ ಪಿಸಿಬಿ ದೂರು

Published 18 ಅಕ್ಟೋಬರ್ 2023, 5:17 IST
Last Updated 18 ಅಕ್ಟೋಬರ್ 2023, 5:17 IST
ಅಕ್ಷರ ಗಾತ್ರ

ಲಾಹೋರ್‌: ಅಹಮದಾಬಾದಿನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ಸಂದರ್ಭದಲ್ಲಿ ಕೆಲವು ಅಹಿತಕರ ಪ್ರಕರಣಗಳು ವರದಿಯಾಗಿವೆ. ಪಾಕ್ ಆಟಗಾರರ ವಿರುದ್ಧ ಭಾರತ ತಂಡದ ಕ್ರಿಕೆಟ್ ಅಭಿಮಾನಿಗಳ ನಡವಳಿಕೆಯ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಝಕಾ ಅಶ್ರಫ್ ಅವರು ಐಸಿಸಿಗೆ ಪ್ರತಿಭಟನೆ ಸಲ್ಲಿಸಿದ್ದಾರೆ.

ಪ್ರೇಕ್ಷಕರ ‘ಅನುಚಿತ ವರ್ತನೆ’ ಬಗ್ಗೆ ಪಿಸಿಬಿಯು ಮಂಗಳವಾರ ಅಧಿಕೃತವಾಗಿ ದೂರು ಸಲ್ಲಿಸಿದೆ.

‘ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಅಶ್ರಫ್ ಅವರೂ ವೀಕ್ಷಿಸಿದ್ದರು.  ಅಶ್ರಫ್ ಅವರನ್ನು ಬಿಸಿಸಿಐನ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಪಂದ್ಯದ ವೇಳೆ ಕೆಲವು ಪ್ರೇಕ್ಷಕರು ಪಾಕ್‌ ಆಟಗಾರರ ವಿರುದ್ಧ ಕೂಗಿದ ಘೋಷಣೆ, ಮತ್ತಿತರ ವಿಷಯಗಳಿಂದ ಅಶ್ರಫ್ ಅವರು ಅಸಮಾಧಾನಗೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT