ಚೆನ್ನೈ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಸೋಮವಾರ) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಅಫ್ಗಾನಿಸ್ತಾನ ಎದುರು ಸೋತು ಮುಖಭಂಗ ಅನುಭವಿಸಿತು.

ಈ ಮೂಲಕ ಅಫ್ಗಾನಿಸ್ತಾನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನವನ್ನು ಅಫ್ಗಾನಿಸ್ತಾನ ಬೌಲರ್‌ಗಳು 282 ರನ್‌ಗಳಿಗೆ ಕಟ್ಟಿಹಾಕಿದ್ದರು.

ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282 ರನ್ ಸಾಧಾರಣ ರನ್ ಗಳಿಸಿದ್ದರು. ಈ ಮೊತ್ತವನ್ನು ಬೆನ್ನತ್ತಿದ್ದ ಅಫ್ಗಾನಿಸ್ತಾನ ಆಟಗಾರರು ಸುಲಭವಾಗಿ ಗುರಿಯನ್ನು ಮುಟ್ಟಿದರು.

ಅಫ್ಗಾನಿಸ್ತಾನ 2 ವಿಕೆಟ್ ನಷ್ಟಕ್ಕೆ 49 ಓವರ್‌ಗಳಲ್ಲಿ 286 ರನ್ ಗಳಿಸಿ ವಿಜಯದ ಕೇಕೆ ಹಾಕಿತು.

ಅಫ್ಗಾನಿಸ್ತಾನ ಪರ ರಹಮತ್ ಶಾ 77 ಅತ್ಯುತ್ತಮ ಪ್ರದರ್ಶನ ನೀಡಿದರು. ರಹಮಾನುಲ್ಲಾ ಗುರ್ಬಾಜ್ 66, ಇಬ್ರಾಹಿಂ ಜಾರ್ದನ್ 87, ಹಸ್ಮತುಲ್ಲಾ ಶಾಹೀದಿ 48 ರನ್ ಗಳಿಸಿ ಪಾಕ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ನಾಲ್ವರೂ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು.

ಈ ಜೋಡಿಗಳನ್ನು ಮುರಿಯುವುದರಲ್ಲಿ ಪಾಕ್ ಬೌಲರ್‌ಗಳು ಯಶಸ್ವಿಯಾಗಲಿಲ್ಲ. ಈ ಮೂಲಕ ಟೂರ್ನಿಯಲ್ಲಿ ಪಾಕ್ ಕಳಪೆ ಪ್ರದರ್ಶನ ಮುಂದುವರೆದಿದೆ.

ಇದಕ್ಕೂ ಮೊದಲು ಅಫ್ಗಾನಿಸ್ತಾನ ಆಟಗಾರರ ಶಿಸ್ತುಬದ್ದ ಬೌಲಿಂಗ್ ದಾಳಿಗೆ ಮಂಕಾದ ಪಾಕಿಸ್ತಾನ ಆಟಗಾರರು 7 ವಿಕೆಟ್ ಕಳೆದುಕೊಂಡು 282 ರನ್‌ಗಳ ಸಾಧಾರಣ ಗುರಿಯನ್ನು ನೀಡಿದ್ದರು.

ಪಾಕಿಸ್ತಾನದ ಪರ ಅಬ್ದುಲ್ ಶಾಫಿಕ್ (58) ಮತ್ತು ಬಾಬರ್ ಅಜಂ (74) ಮಾತ್ರ ಉತ್ತಮ ಪ್ರದರ್ಶನ ತೋರಿದರು.

ಇಮಾಮ್ ಉಲ್ ಹಕ್ 17, ಮೊಹಮ್ಮದ್ ರಿಜ್ವಾನ್ 8, ಶಕೀಲ್ 25, ಶಾದಾಬ್ ಖಾನ್ 40, ಇಫ್ತಿಕಾರ್ ಅಹಮ್ಮದ್ 40, ಶಾಹೀನ್ ಆಫ್ರೀದಿ 3 ರನ್ ಹೊಡೆದರು.

ಅಫ್ಗಾನಿಸ್ತಾನ ಪರ ನೂರ್ ಅಹಮ್ಮದ್ 3 ವಿಕೆಟ್ ಕಬಳಿಸಿ ಗಮನ ಸೆಳೆದರು.

ಸತತ ಎರಡು ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎದುರು ಪರಾಭವಗೊಂಡಿರುವ ಪಾಕಿಸ್ತಾನ ತಂಡಕ್ಕೆ ಸೋಮವಾರ ಗೆಲುವು ಅನಿವಾರ್ಯವಾಗಿತ್ತು. ಆದರೆ ನಿರಾಶೆಯಾಯಿತು. ಇನ್ನೊಂದು ಸೋಲು ಎದುರಾದರೆ ಸೆಮಿಫೈನಲ್ ಪ್ರವೇಶದ ಸಾಧ್ಯತೆ ಕ್ಷೀಣಿಸಲಿದೆ. ನಾಲ್ಕು ಪಾಯಿಂಟ್ಸ್ ಹೊಂದಿರುವ ಬಾಬರ್ ಬಳಗಕ್ಕೆ(–0.456) ಕಡಿಮೆ ಇರುವುದು ಚಿಂತೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.