ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

T20 ವಿಶ್ವಕಪ್ ಮೆಲುಕು | ಆಸ್ಟ್ರೇಲಿಯಾಕ್ಕೆ ಚೊಚ್ಚಲ ವಿಶ್ವಕಪ್

Published 30 ಮೇ 2024, 0:51 IST
Last Updated 30 ಮೇ 2024, 0:51 IST
ಅಕ್ಷರ ಗಾತ್ರ
  • ಭಾರತದಲ್ಲಿ ನಡೆದ ಆರನೇ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ (2016) ಬಳಿಕ ಹಲವು ವರ್ಷ ಈ ಟೂರ್ನಿ ನಡೆಯಲಿಲ್ಲ. ಐದು ವರ್ಷಗಳ ನಂತರ ನಡೆದ (2021) ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಮೊದಲ ಬಾರಿ ವಿಶ್ವಕಪ್ ಗೆದ್ದುಕೊಂಡಿತು. 

  • ಐದು ವರ್ಷ ಟಿ20 ವಿಶ್ವಕಪ್‌ ನಡೆಯದೆ ಇರಲು ಹಲವು ಕಾರಣಗಳೂ ಇದ್ದವು. 2017 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (ಮಿನಿ ವಿಶ್ವಕಪ್) ಹಾಗೂ 2019 ರಲ್ಲಿ ಏಕದಿನ ವಿಶ್ವಕಪ್‌ ನಡೆಯಿತು. 2020ರಲ್ಲಿ ಕೋವಿಡ್–19 ಕಾರಣಕ್ಕೆ ಟೂರ್ನಿ ಸಾಧ್ಯವಾಗಲಿಲ್ಲ.

  • 2020ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣಕ್ಕೆ ಮುಂದೂಡಲಾಯಿತು. ನಂತರ ಭಾರತ ಆತಿಥ್ಯ ವಹಿಸಿಕೊಂಡರೂ ನಡೆಸಲು ಸಾಧ್ಯವಾಗಲಿಲ್ಲ. ತಟಸ್ಥ ತಾಣವಾದ ಯುಎಇಯಲ್ಲಿ ನಡೆಸಲು ಬಿಸಿಸಿಐ ಸಮ್ಮತಿಸಿತು.

  • ನವೆಂಬರ್ 14 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮಿಚೆಲ್ ಮಾರ್ಷ್ (ಅಜೇಯ 77) ಮತ್ತು ಡೇವಿಡ್ ವಾರ್ನರ್ (53) ಅವರ ಅಬ್ಬರದ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ನ್ಯೂಜಿಲೆಂಡ್ ಎದುರು ಜಯಿಸಿತು. 

  • ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಭಾರತ ತಂಡಕ್ಕೆ ನಾಲ್ಕರ ಘಟ್ಟ ಪ್ರವೇಶಿಸಲು ವಿಫಲವಾಯಿತು.

  • ಭಾರತ ತಂಡವು ವಿಶ್ವಕಪ್ ಇತಿಹಾಸದಲ್ಲಿಯೇ ಮೊದಲ ಬಾರಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ಎದುರು ಸೋಲು ಅನುಭವಿಸಿತು. ಇದುವರೆಗೆ ವಿಶ್ವಕಪ್ (ಏಕದಿನ ಮತ್ತು ಟಿ20) ಟೂರ್ನಿಗಳಲ್ಲಿ ಭಾರತವು ಪಾಕಿಸ್ತಾನದ ಎದುರು ಸೋತಿರಲಿಲ್ಲ. 

  • ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 157 ರನ್ ಗಳಿಸಿತು. ಆದರೆ, ಈ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಭಾರತದ ಬೌಲರ್‌ಗಳು ವಿಫಲರಾದರು. ಪಾಕ್ ಆರಂಭಿಕ ಜೋಡಿ ಬಾಬರ್ ಆಜಂ (ಔಟಾಗದೇ 68) ಮತ್ತು ಮೊಹಮ್ಮದ್ ರಿಜ್ವಾನ್ (ಔಟಾಗದೆ 79) ಅವರು 17.5 ಓವರ್‌ಗಳಲ್ಲಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪ್ರಮುಖ ಅಂಶಗಳು

ಏಳನೇ ವಿಶ್ವಕಪ್: 2021 (ಅಕ್ಟೋಬರ್‌ 17 ರಿಂದ ನವೆಂಬರ್ 14)

ಆತಿಥ್ಯ: ಭಾರತ 

ಪಂದ್ಯ ನಡೆದ ಸ್ಥಳ: ಒಮನ್/ಯುನೈಟೆಡ್ ಅರಬ್ ಎಮಿರೇಟ್ಸ್‌ 

ರನ್ನರ್ಸ್ ಅಪ್: ನ್ಯೂಜಿಲೆಂಡ್‌

ಸ್ಪರ್ಧಿಸಿದ ತಂಡಗಳು: 16

ಪಂದ್ಯಗಳು:  45

ಸರಣಿ ಶ್ರೇಷ್ಠ: ಡೇವಿಡ್‌ ವಾರ್ನರ್‌ (289 ರನ್)

ಶ್ರೇಷ್ಠ ಬ್ಯಾಟರ್: ಬಾಬರ್ ಅಜಂ (ಪಾಕಿಸ್ತಾನ, 303 ರನ್)

ಶ್ರೇಷ್ಠ ಬೌಲರ್: ವನಿಂದು ಹಸರಂಗ (ಶ್ರೀಲಂಕಾ, 16 ವಿಕೆಟ್)

  • ನ್ಯೂಜಿಲೆಂಡ್ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತ್ತು. ಆಗ ಟೆಸ್ಟ್ ವಿಶ್ವ ಚಾಂಪಿಯನ್‌ ಆಗಿದ್ದ ನ್ಯೂಜಿಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು.  

  • ಐಸಿಸಿ ಪ್ರಕಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಟಿವಿ ಮತ್ತು ಡಿಜಿಟಿಲ್ ವಾಹಿನಿಗಳಲ್ಲಿ 16.7 ಕೋಟಿ ಜನರು ವೀಕ್ಷಿಸಿದ್ದರು. 200 ದೇಶಗಳಲ್ಲಿ ಟೂರ್ನಿಯನ್ನು 10 ಸಾವಿರ ಗಂಟೆಗಳಷ್ಟು ಅವಧಿಯಲ್ಲಿ ವೀಕ್ಷಿಸಿದ್ದರು. 

  • ಟೂರ್ನಿಯಲ್ಲಿ ನಡೆದ ಭಾರತ ಮತ್ತು  ‍ಪಾಕಿಸ್ತಾನ ನಡುವಣ ಪಂದ್ಯವನ್ನು ಅತಿ ಹೆಚ್ಚು ಜನರು ನೋಡಿದ್ದರು. ಅಲ್ಲದೇ 15.9 ಬಿಲಿಯನ್ ನಿಮಿಷಗಳಷ್ಟು ಕಾಲ ವೀಕ್ಷಣೆಯಾಗಿದೆ ಎಂದು ಸ್ಟಾರ್ ಇಂಡಿಯಾ ನೆಟ್‌ವರ್ಕ್ ತಿಳಿಸಿತು.

ಆಧಾರ: ಕ್ರೀಡಾ ವೆಬ್‌ಸೈಟ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT