ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 ವಿಶ್ವಕಪ್ ಚುಟುಕು | ಅಚ್ಚರಿ ಮೂಡಿಸಿದ 10 ಫಲಿತಾಂಶ

Published 1 ಜೂನ್ 2024, 23:45 IST
Last Updated 1 ಜೂನ್ 2024, 23:45 IST
ಅಕ್ಷರ ಗಾತ್ರ

ವಿಶ್ವಕಪ್ ಇದುವರೆಗೆ ಅನೇಕ ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾ ಗಿದೆ. ಅನುಭವಿ ತಂಡಗಳು, ಪದಾರ್ಪಣೆ ಮಾಡಿದ ತಂಡಗಳಿಗೆ ತಲೆಬಾಗಿದ ನಿದರ್ಶನಗಳು ಇವೆ. ಯಾವುದೇ ತಂಡವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂಬ ಸಂದೇಶವನ್ನು ಈ ಫಲಿತಾಂಶಗಳು ಸಾರಿವೆ. ಇಲ್ಲಿ ಅಂಥ ಹತ್ತು ಫಲಿತಾಂಶಗಳನ್ನು ನೀಡಲಾಗಿದೆ

  • 2007: ಜೊಹಾನೆಸ್‌ಬರ್ಗ್‌ನಲ್ಲಿ ವಿಶ್ವಕಪ್‌ನ ಗುಂಪು ಹಂತದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶಕ್ಕೆ ಆರು ವಿಕೆಟ್‌ಗಳಿಂದ ಸೋತಿತ್ತು.

  • 2007: ಕೇಪ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ಐದು ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿತ್ತು. ಎಲ್ಟನ್ ಚಿಗುಂಬರ (20ಕ್ಕೆ3) ಮತ್ತು ಬ್ರೆಂಡನ್‌ ಟೇಲರ್ (ಅಜೇಯ 60) ಆಟ ಇದಕ್ಕೆ ಕಾರಣವಾಯಿತು.

  • 2009: ನೆದರ್ಲೆಂಡ್ಸ್‌ ತಂಡವು ಲಾರ್ಡ್ಸ್‌ನಲ್ಲಿ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್‌ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ 5 ವಿಕೆಟ್‌ಗೆ 162 ರನ್ ಹೊಡೆಯಿತು. ನೆದರ್ಲೆಂಡ್‌ ಕೊನೆಯ ಎಸೆತದಲ್ಲಿ ಜಯ ಗಳಿಸಿತು. (20 ಓವರುಗಳಲ್ಲಿ 6 ವಿಕೆಟ್‌ಗೆ 163)

  • 2009: ಐರ್ಲೆಂಡ್‌ ತಂಡ ನಾಟಿಂಗಮ್‌ನಲ್ಲಿ ನಡೆದ ಗುಂಪು ಹಂತದ ಪಂದ್ಯ ದಲ್ಲಿ ಬಾಂಗ್ಲಾವನ್ನು 10 ಎಸೆತಗಳಿರುವಂತೆ 6 ವಿಕೆಟ್‌ಗಳಿಂದ ಸೋಲಿಸಿತ್ತು.

  • 2014: ಎರಡನೇ ಬಾರಿ ಚುಟುಕು ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ತಂಡ, ಇಂಗ್ಲೆಂಡ್ ತಂಡವನ್ನು (ಈ ಸಲ 45 ರನ್‌ಗಳಿಂದ) ಸೋಲಿಸಿತು.  

  • 2014: ಸಹಸದಸ್ಯ ರಾಷ್ಟ್ರವಾಗಿದ್ದ ಹಾಂಗ್‌ಕಾಂಗ್‌ ಚಿತ್ತಗಾಂಗ್‌ನಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 2 ವಿಕೆಟ್‌ಗಳಿಂದ ಮಣಿಸಿತ್ತು.

  • 2016: ನಾಗ್ಪುರದಲ್ಲಿ ನಡೆದ ಸೂಪರ್‌ ಟೆನ್‌ ಹಂತದ ಪಂದ್ಯದಲ್ಲಿ ಅಫ್ಗಾನಿಸ್ತಾನ ಆರು ರನ್‌ಗಳಿಂದ ವೆಸ್ಟ್‌ ಇಂಡೀಸ್ ತಂಡವನ್ನು ಮಣಿಸಿತು. ಪಂದ್ಯದ ಆಟಗಾರ ನಜೀಬುಲ್ಲಾ ಜದ್ರಾನ್‌ 48 ರನ್ ಗಳಿಸಿದರು. ಆದರೆ ಈ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದು ಕೊನೆಗೆ ಇದೇ ವೆಸ್ಟ್‌ ಇಂಡೀಸ್‌ ತಂಡ!

  • 2016: ಧರ್ಮಶಾಲಾದಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಮೊದಲ ಬಾರಿ ಆಡಿದ ಒಮಾನ್ ತನಗಿಂತ ಅನುಭವಿ ಐರ್ಲೆಂಡ್ ತಂಡವನ್ನು ಎರಡು ಎಸೆತಗಳಿರುವಂತೆ ಎರಡು ವಿಕೆಟ್‌ಗಳಿಂದ ಸೋಲಿಸಿತ್ತು.

  • 2021: ದುಬೈನಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್‌  ಆರು ರನ್‌ಗಳಿಂದ ಪ್ರಬಲ ಬಾಂಗ್ಲಾದೇಶ ತಂಡವನ್ನು ಸೋಲಿಸಿತು.

  • 2022: ಆಸ್ಟ್ರೇಲಿಯಾದ ಗಿಲಾಂಗ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಮೀಬಿಯಾ 55 ರನ್‌ಗಳ ದೊಡ್ಡ ಅಂತರದಿಂದ ಶ್ರೀಲಂಕಾವನ್ನು ಸೋಲಿಸಿತ್ತು. ಗೆಲುವಿಗೆ 164 ರನ್ ಗಳಿಸಬೇಕಾಗಿದ್ದ ಲಂಕಾ 108 ರನ್ನಿಗೆ ಕುಸಿಯಿತು.

(ಮಾಹಿತಿ: ಕ್ರಿಕೆಟ್‌ ವೆಬ್‌ಸೈಟ್‌ಗಳಿಂದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT