ಬುಧವಾರ, ಸೆಪ್ಟೆಂಬರ್ 29, 2021
20 °C

Tokyo Olympics| ಮಹಿಳೆಯರ ಜಾವೆಲಿನ್ ಥ್ರೋ: ಅನುರಾಣಿ ಕನಸು ಭಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ:  ಭಾರತೀಯ ಅಥ್ಲಿಟ್‌ ಅನು ರಾಣಿ ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ ಸ್ಪರ್ಧೆಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. 

ಮೊದಲ ಸುತ್ತಿನಲ್ಲಿ 50.35 ಮೀಟರ್‌ ವರೆಗೆ ಜಾವೆಲಿನ್‌ ಎಸೆದ ಅವರು ಕಳಪೆ ಪ್ರದರ್ಶನ ತೋರಿದರು. ಎರಡನೇ ಬಾರಿಗೆ ಉತ್ತಮ ಪ್ರಯತ್ನ (53.19 ಮೀಟರ್‌) ಮಾಡಿದರಾದರು 12 ಸ್ಥಾನದಲ್ಲಿ ಉಳಿದರು. 

ಮೂರನೇ ಬಾರಿಗೆ ಮತ್ತಷ್ಟು ದೂರಕ್ಕೆ (54.04 ಮೀಟರ್‌)  ಜಾವೆಲಿನ ಎಸೆದ ಅನು 14 ಸ್ಥಾನಕ್ಕೆ ಬಂದು ನಿಲ್ಲಬೇಕಾಯಿತು. ಇದರೊಂದಿಗೆ ಫೈನಲ್‌ ತಲುಪುವ ಅನು ಕನಸು ಭಗ್ನಗೊಂಡಿತು. 

ಇದೇ ವರ್ಷದ ಮಾರ್ಚ್‌ನಲ್ಲಿ ಪಟಿಯಾಲದಲ್ಲಿ ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಉತ್ತರ ಪ್ರದೇಶದ ಅನು 63.24 ಮೀಟರ್ಸ್ ದೂರದ ಸಾಧನೆ ಮಾಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು