ಹುಬ್ಬಳ್ಳಿ: ಧಾರವಾಡದ ಯುನಿವರ್ಸಿಟಿ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಡಾ. ವಿ. ಡಿ. ಪಾಟೀಲ ಅವರು ಭಾರತ ಅಟ್ಯಾ ಪಟ್ಯಾ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾಶಾಲೆಯ ಕೋಚ್ ಲಕ್ಷ್ಮಣ ಲಮಾಣಿ ಸದಸ್ಯರಾಗಿ ನೇಮಕವಾಗಿದ್ದಾರೆ. ನಾಗಪುರದಲ್ಲಿ ಮಂಗಳವಾರ ನಡೆದ ಫೆಡರೇಷನ್‌ನ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 2022ರವರೆಗೆ ಇವರ ಅಧಿಕಾರವಧಿ ಇರುತ್ತದೆ. ಮಹಾರಾಷ್ಟ್ರದ ಡಾ. ಕವೀಶ್ವರ (ಕಾರ್ಯದರ್ಶಿ), ಚಂಡೀಗಡದ ಲಂಬಾ (ಖಜಾಂಜಿ) ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಮಧ್ಯಪ್ರದೇಶದ ಜಗದೀಶ ವರ್ಮಾ, ಗೋವಾದ ಕೃಷ್ಣ ಕರಾಡೆ, ಪುದುಚೇರಿಯ ಶಿವಕುಮಾರ್, ಸಹ ಕಾರ್ಯದರ್ಶಿಗಳಾಗಿ ಉತ್ತರ ಪ್ರದೇಶದ ಯುವಜನ ಪಾಲ, ಪಶ್ಚಿಮ ಬಂಗಾಳದ ಸ್ವಪ್ನಾ, ಮಹಾರಾಷ್ಟ್ರದ ಅಮರ್, ಬಿಹಾರದ ವಿಜಯ ಕುಮಾರ್ ನೇಮಕವಾದರು. ಮಣಿಪುರದ ಓನಂ ಸಿಂಗ್, ಹರಿಯಾಣದ ದೀಪೇಂದ್ರ, ಜಾರ್ಖಂಡ್‌ನ ಅಜೇಯ್ ಝಾ, ಒಡಿಶಾದ ಪುಂಡಾ, ಜಮ್ಮು ಮತ್ತು ಕಾಶ್ಮೀರದ ವಾಸೀಮ್ ರಾಜ್ ಮತ್ತು ರಾಜಸ್ಥಾನದ ಜಲನಿ ಸದಸ್ಯರಾಗಿ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.