ಕೋಲ್ಕತ್ತ: ನಾಯಕ ಶಾಯ್ ಹೋಪ್ ಅವರ ಸತತ ಎರಡನೇ ಅರ್ಧ ಶತಕ ಮತ್ತು ಬೌಲರ್ಗಳ ಶಿಸ್ತುಬದ್ಧ ದಾಳಿಯ ಪ್ರದರ್ಶನದಿಂದ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಪಂದ್ಯದಲ್ಲಿ ಗುರುವಾರ ಇಟಲಿ ತಂಡದ ಮೇಲೆ 42 ರನ್ಗಳ ಸುಲಭ ಗೆಲುವು ಸಾಧಿಸಿತು. ಮಾತ್ರವಲ್ಲ, ಲೀಗ್ನಲ್ಲಿ ಅಜೇಯವಾಯಿತು.

ಸಿ ಗುಂಪಿನ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಲಿಲ್ಲ. ಆದರೆ ಕೆರೀಬಿಯನ್ನರ ವೇಗ ಮತ್ತು ಸ್ಪಿನ್ ದಾಳಿ ಯಶಸ್ಸು ಕಂಡಿತು. ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದ ವೆಸ್ಟ್ ಇಂಡೀಸ್ ಸೂಪರ್ ಎಂಟರ ಹಂತಕ್ಕೆ ಆತ್ಮವಿಶ್ವಾಸದಿಂದ ಸಜ್ಜಾಯಿತು.

‘ಪಂದ್ಯದ ಆಟಗಾರ’ನಾದ ಹೋಪ್ 46 ಎಸೆತಗಳಲ್ಲಿ 75 ರನ್ ಹೊಡೆದು ವೆಸ್ಟ್ ಇಂಡೀಸ್ ತಂಡ 20 ಓವರುಗಳಲ್ಲಿ 6 ವಿಕೆಟ್ಗೆ 164 ರನ್ ಗಳಿಸಲು ನೆರವಾದರು. ಉತ್ತರವಾಗಿ ಇಟಲಿ 18 ಓವರುಗಳಲ್ಲಿ 123 ರನ್ಗಳಿಗೆ ಹೋರಾಟ ಮುಗಿಸಿತು. ಮಧ್ಯಮ ವೇಗಿಗಳಾದ ಮ್ಯಾಥ್ಯೂ ಫೋರ್ಡ್ (19ಕ್ಕೆ3), ಶಮರ್ ಜೋಸೆಫ್ (30ಕ್ಕೆ4) ಮತ್ತು ಎಡಗೈ ಸ್ಪಿನ್ನರ್ ಗುಡಕೇಶ್ ಮೋತಿ (24ಕ್ಕೆ2) ಅವರು ಎದುರಾಳಿ ತಂಡದ ಪತನಕ್ಕೆ ಕಾರಣರಾದರು.

ಹೋಪ್ ಸರಾಗವಾಗಿ ಆಡಿ ಆರು ಬೌಂಡರಿ, ನಾಲ್ಕು ಸಿಕ್ಸರ್ ಬಾರಿಸಿದರು. ಇಟಲಿಯ ಅನುಭವಿ ಸ್ಪಿನ್ನರ್ಗಳಾದ ಬೆನ್ ಮನೆಂಟಿ (37ಕ್ಕೆ2) ಮತ್ತು ಕ್ರಿಶನ್ ಕಲುಗಮಗೆ (25ಕ್ಕೆ2) ಅವರು ವಿಂಡೀಸ್ ರನ್ವೇಗಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಿದರು.

ಇಟಲಿ ಒಂದು ಗೆಲುವಿನೊಡನೆ (ನೇಪಾಳ ವಿರುದ್ಧ) ತನ್ನ ಅಭಿಯಾನ ಮುಗಿಸಿತು.

ಸ್ಕೋರುಗಳು: ವೆಸ್ಟ್ ಇಂಡೀಸ್: 20 ಓವರುಗಳಲ್ಲಿ 6ಕ್ಕೆ 165 (ಶಾಯ್ ಹೋಪ್ 75, ರೋಸ್ಟನ್ ಚೇಸ್ 24, ಶೆರ್ಫೇನ್ ರುದರ್ಫೋರ್ಡ್ ಔಟಾಗದೇ 24; ಬೆನ್ ಮನೆಂಟಿ 27ಕ್ಕೆ2, ಕ್ರಿಶನ್ ಕಲುಗಮಗೆ 25ಕ್ಕೆ2); ಇಟಲಿ:18 ಓವರುಗಳಲ್ಲಿ 123 (ಜೆ.ಜೆ.ಸ್ಮಟ್ಸ್ 24, ಬೆನ್ ಮನೆಂಟಿ 26, ಮ್ಯಾಥ್ಯೂ ಫೋರ್ಡ್ 19ಕ್ಕೆ3, ಗುಡಕೇಶ ಮೋತಿ 24ಕ್ಕೆ2, ಶಮರ್ ಜೋಸೆಫ್ 30ಕ್ಕೆ4). ಪಂದ್ಯದ ಆಟಗಾರ: ಶಾಯ್ ಹೋಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.