ನರಗುಂದ (ಗದಗ): ಕರ್ನಾಟಕ ಪುರುಷ ಮತ್ತು ಮಹಿಳಾ ತಂಡ ದವರು ಇಲ್ಲಿ ಶನಿವಾರ ಆರಂಭ ಗೊಂಡ ದಕ್ಷಿಣ ವಲಯ 2ನೇ ಆಟ್ಯಾ ಪಾಟ್ಯಾ ಟೂರ್ನಿಯಲ್ಲಿ ಮಿಶ್ರ ಫಲ ಅನುಭವಿಸಿದರು. ಪುರುಷರ ವಿಭಾಗದಲ್ಲಿ ಆಡಿದ ಎರಡು ಲೀಗ್ ಪಂದ್ಯಗಳ ಪೈಕಿ ರಾಜ್ಯ ತಂಡ ಒಂದರಲ್ಲಿ ಜಯ ಸಾಧಿಸಿದರೆ ಇನ್ನೊಂದರಲ್ಲಿ ಸೋಲು ಕಂಡಿತು. ಮಹಿಳೆಯರು ಮೊದಲ ಪಂದ್ಯದಲ್ಲೇ ಸೋಲಿನ ಕಹಿ ಉಂಡರು.

ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಮಧ್ಯಾಹ್ನ ನಡೆದ ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಕೇರಳವನ್ನು 2–0 ಸೆಟ್ಗಳಿಂದ ಮಣಿಸಿತು. ಮೊದಲ ಸೆಟ್ನಲ್ಲಿ ಕರ್ನಾಟಕ 13–10ರಿಂದ ಜಯ ಸಾಧಿಸಿದರೆ ಎರಡನೇ ಸೆಟ್ನಲ್ಲಿ 14–10ರಿಂದ ಎದುರಾಳಿಗಳನ್ನು ಮಣಿಸಿತು.

ಆದರೆ ಪುರುಷರ ವಿಭಾಗದ ಮೂರನೇ ಪಂದ್ಯದಲ್ಲಿ ತಮಿಳುನಾಡು ತಂಡ ಕರ್ನಾಟಕದ ವಿರುದ್ಧ ಜಯ ಸಾಧಿಸಿತು. ಮೊದಲ ಸೆಟ್ನಲ್ಲಿ 12–8ರಿಂದ ಮೇಲುಗೈ ಸಾಧಿಸಿದ ತಮಿಳುನಾಡು ಎರಡನೇ ಸೆಟ್ನಲ್ಲಿ 22– 19ರಿಂದ ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ಪುದುಚೇರಿ ತಂಡ ತಮಿಳುನಾಡು ವಿರುದ್ಧ 2–0 ಸೆಟ್ಗಳ ಜಯ ಸಾಧಿಸಿತು. ಮಹಿಳಾ ವಿಭಾಗದ ಪಂದ್ಯದ ಲ್ಲಿಯೂ ಪುದುಚೇರಿ ಮೇಲುಗೈ ಸಾಧಿಸಿತು. ಕರ್ನಾಟಕವನ್ನು ಈ ತಂಡ 2–0 ಸೆಟ್ಗಳಿಂದ ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.