ಸ್ಪೆಲ್ಬರ್ಗ್, ಅಸ್ಟ್ರೀಯಾ (ಎಎಫ್ಪಿ): ಉತ್ತಮ ಲಯದಲ್ಲಿರುವ ಲೂಯಿಸ್ ಹ್ಯಾಮಿಲ್ಟನ್ ಅಸ್ಟ್ರೀಯಾ ಫಾರ್ಮುಲಾ ಒನ್ ರೇಸ್ನಲ್ಲಿ ಪೋಲ್ ಪೋಷಿಷನ್ ಪಡೆದುಕೊಂಡಿದ್ದಾರೆ.

ಶನಿವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಹ್ಯಾಮಿಲ್ಟನ್ ಉತ್ತಮ ಚಾಲನಾ ಕೌಶಲ ತೋರಿಸಿದರು. ನಾಟ ಕೀಯ ಬೆಳವಣಿಗೆಗೆ ಸಾಕ್ಷಿಯಾದ ಅರ್ಹತಾ ಸುತ್ತಿನಲ್ಲಿ ಅವರು ಒಂದು ನಿಮಿಷ 7.9222 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಹ್ಯಾಮಿಲ್ಟನ್ ವೃತ್ತಿ ಜೀವ ನದಲ್ಲಿ ಪಡೆದ 54ನೇ ಪೋಲ್ ಪೋಷಿಷನ್ ಇದಾಗಿದೆ.

ಮೆರ್ಸಿಡೆಸ್ ತಂಡದ ನಿಕೊ ರೋಸ್ ಬರ್ಗ್ ಎರಡನೇಯವರಾಗಿ ಗುರಿ ತಲುಪಿ ದರು. ರೋಸ್ಬರ್ಗ್ ಹಿಂದಿನ ಸ್ಪರ್ಧೆಗ ಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ಅವರು ಪಾಯಿಂಟ್ಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.

‘ಈ ಬಾರಿಯ ಋತುವಿನಲ್ಲಿ ನೀಡಿದ ಪ್ರದರ್ಶನದಿಂದ ಸಂತೋಷವಾಗಿದೆ. ಕೆಲ ಸಂದರ್ಭಗಳಲ್ಲಿ ಅತ್ಯಂಕ ಕಠಿಣ ಸವಾಲನ್ನು ಎದುರಿಸಿದೆ. ಇದರಿಂದ ಹಲವಾರು ವಿಷಯಗಳನ್ನು ತಿಳಿದು ಕೊಂಡೆ. ಇಲ್ಲಿನ ವೇಗ ಕಂಡು ನನಗೇ ಅಚ್ಚರಿಯಾಗಿದೆ’ ಎಂದು ಹ್ಯಾಮಿಲ್ಟನ್ ಹೇಳಿದರು.

ಏಳನೇಯವರಾಗಿ ಸ್ಪರ್ಧೆ ಆರಂಭಿ ಸಿದ ರೋಸ್ಬರ್ಗ್ ‘ಈ ಬಾರಿಯ ಸ್ಪರ್ಧೆ ಯಲ್ಲಿ ಹೇಗೆ ಪ್ರದರ್ಶನ ನೀಡುತ್ತೇನೊ ಎನ್ನುವ ಕುತೂಹಲವಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.