ಸಿಡ್ನಿ: ’ಕಳೆದ ಶನಿವಾರ ನಡೆದ ಎಲ್ಲ ಘಟನೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವೇ, ಯಾರ ಮೇಲೂ ಆರೋಪ ಮಾಡಲಾರೆ, ದಯಾಮಾಡಿ ನನ್ನ ತಪ್ಪನ್ನು ಕ್ಷಮಿಸಿ ಬಿಡಿ’ ಎಂದು ಸ್ಟೀವ್ ಸ್ಮೀತ್ ಮಾಧ್ಯಮಗಳ ಎದುರು ಗುರುವಾರ ಕ್ಷಮೆ ಕೋರಿದರು.

ದಕ್ಷಿಣಾ ಆಫ್ರಿಕಾದಿಂದ ಸಿಡ್ನಿಗೆ ಆಗಮಿಸಿದ ಸ್ಟೀವ್ ಸ್ಮಿತ್ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಬಳಿಕ ಮೊದಲ ಬಾರಿಗೆ ಮಾಧ್ಯಮ ಗೋಷ್ಠಿ ನಡೆಸಿ ಕ್ಷಮೆಯಾಚಿಸಿದರು.

ಘಟನೆ ಕುರಿತಂತೆ ತೀವ್ರ ಭಾವುಕರಾಗಿದ್ದ ಸ್ಮಿತ್ ಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ‘ಕ್ರಿಕೆಟ್ ವಿಶ್ವದ ಶ್ರೇಷ್ಟ ಆಟವಾಗಿದೆ, ಕ್ರಿಕೆಟ್ ನನ್ನ ಬದುಕಾಗಿದೆ, ಮುಂದೆ ಇಂತಹ ತಪ್ಪು ಮಾಡಲಾರೆ, ಇದು ನನ್ನ ಜೀವನದಲ್ಲಿ ಮರೆಯಲಾರದ ಅತ್ಯಂತ ಕಹಿ ಘಟನೆಯಾಗಿದೆ, ದಯಮಾಡಿ ಎಲ್ಲರೂ ನನ್ನ ಕ್ಷಮಿಸಿ ಬಿಡಿ‘ ಎಂದು ಕಣ್ನೀರು ಹಾಕಿದರು.

ಮುಂದಿನ ದಿನಗಳಲ್ಲಿ ಕಳೆದು ಹೋದ ಗೌರವವನ್ನು ಮರಳಿ ಪಡೆಯುವ ವಿಶ್ವಾಸವಿದೆ ಎಂದರು. ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳ ಮನಸ್ಸು ನೋಯಿಸಿದಕ್ಕೆ ಕ್ಷಮೆ ಇರಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.