ಮುಂಬೈ: ಅರಬ್ಬಿ ಸಮುದ್ರದಿಂದ ಬೀಸುವ ಗಾಳಿಯಲ್ಲಿ ಈಗ ಕ್ರಿಕೆಟ್ ಕಂಪು ತೇಲಿ ಬರುತ್ತಿದೆ. ‘ಸ್ಥಳೀಯ ಹೀರೊ’ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡದ ಕೋಟಿ ಕೋಟಿ ಅಭಿಮಾನಿಗಳ ನಿರೀಕ್ಷೆಗಳ ನೋಟವೂ ನೆಟ್ಟಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಉತ್ಸಾಹಿ ಆಟಗಾರರ ಅಮೆರಿಕ ಪಡೆಯನ್ನು ಎದುರಿಸಲಿದೆ. ‘ಹಾಲಿ ಚಾಂಪಿಯನ್’ ಆಗಿರುವ ಭಾರತಕ್ಕೆ ಸತತ ಎರಡನೇ ಬಾರಿ ಟಿ20 ಕಿರೀಟ ಧರಿಸಿದ ಸಾಧನೆ ಮಾಡುವ ತಂಡವಾಗಿ ಹೊರಹೊಮ್ಮುವ ಅವಕಾಶ ಇದೆ. ಅಲ್ಲದೇ ತವರಿನಂಗಳದಲ್ಲಿ ಟಿ20 ಟ್ರೋಫಿ ಜಯಿಸಿದ ಪ್ರಥಮ ತಂಡವಾಗುವ ನಿರೀಕ್ಷೆಯೂ ಸೂರ್ಯ ಬಳಗದ ಮೇಲೆ ಇದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ 2024ರಲ್ಲಿ ತಂಡವು ಚಾಂಪಿಯನ್ ಆಗಿತ್ತು. ಭಾರತ ತಂಡದ ಇಬ್ಬರು ಆಧಾರಸ್ತಂಭಗಳಾಗಿದ್ದ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರು ನಿವೃತ್ತಿಯಾಗಿದ್ದಾರೆ. ಆದ್ದರಿಂದ ಅವರ ಸ್ಥಾನವನ್ನು ತುಂಬುವ ಅವಕಾಶ ಯುವ ಆಟಗಾರರಿಗೆ ಇದೆ. ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿರುವ ವಿಕೆಟ್ಕೀಪರ್ ಇಶಾನ್ ಕಿಶನ್ ಹಾಗೂ ನಿರ್ಭೀತ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಇವರಿಬ್ಬರೂ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.

ಗಾಯದಿಂದ ಚೇತರಿಸಿಕೊಂಡಿರುವ ತಿಲಕ್ ವರ್ಮಾ ಮೂರನೇ ಹಾಗೂ ಲಯಕ್ಕೆ ಮರಳಿರುವ ಸೂರ್ಯ ನಾಲ್ಕನೇ ಕ್ರಮಾಂಕದಲ್ಲಿದ್ದಾರೆ. ಬೌಲರ್ಗಳಿಗೆ ಈ ನಾಲ್ವರಷ್ಟೇ ಕಠಿಣ ಸವಾಲು ಅಲ್ಲ. ರಿಂಕು ಸಿಂಗ್, ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಕೂಡ ಈ ಸಾಲಿನಲ್ಲಿದ್ದಾರೆ. ಜಸ್ಪ್ರೀತ್ ಬೂಮ್ರಾ ಸಾರಥ್ಯದ ಬೌಲಿಂಗ್ ಪಡೆಗೆ ಈಗ ಮೊಹಮ್ಮದ್ ಸಿರಾಜ್ ಕೂಡ ಸೇರ್ಪಡೆಯಾಗಿದ್ಧಾರೆ. ಗಾಯಗೊಂಡಿರುವ ಹರ್ಷಿತ್ ರಾಣಾ ಬದಲಿಗೆ ಸಿರಾಜ್ ಆಡುವುದು ಬಹುತೇಕ ಖಚಿತವಾಗಿದೆ. ಎಡಗೈ ವೇಗಿ ಅರ್ಷದೀಪ್ ಸಿಂಗ್, ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ತಮ್ಮ ಮೋಡಿ ತೋರಲು ಸಿದ್ಧರಾಗಿದ್ಧಾರೆ.

ಹೋದ ಸಲದ ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದ ಅಮೆರಿಕ ತಂಡದಲ್ಲಿ ಬಹುತೇಕ ಭಾರತೀಯ ಆಟಗಾರರೇ ಇದ್ದಾರೆ. ಅವರೀಗ ತಮ್ಮ ತಾಯ್ನೆಲದಲ್ಲಿ ಭಾರತ ತಂಡದ ಎದುರು ಆಡಲಿದ್ದಾರೆ. ನಾಯಕ ಮೊನಾಂಕ್ ಪಟೇಲ್ ಅವರ ಸಾರಥ್ಯದ ತಂಡವು ಸವಾಲೆಸೆಯಲು ಸಿದ್ಧವಾಗಿದೆ. ಅದರಲ್ಲಿ ಕನ್ನಡಿಗ ನಾಸ್ತುಷ್ ಕೆಂಜಿಕೆ ಕೂಡ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಅನುಭವ ಮತ್ತು ಸಾಮರ್ಥ್ಯದಲ್ಲಿ ಭಾರತವೇ ಗೆಲುವಿನ ನೆಚ್ಚಿನ ತಂಡ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅಮೆರಿಕವು ಕಠಿಣ ಪೈಪೋಟಿಯೊಡ್ಡಿದರೆ ಅಚ್ಚರಿಪಡಬೇಕಿಲ್ಲ. ಟಾಸ್ ಗೆದ್ದ ತಂಡವು ತೆಗೆದುಕೊಳ್ಳುವ ನಿರ್ಧಾರವೂ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಇಶಾನ್ ಕಿಶನ್ (ವಿಕೆಟ್ಕೀಪರ್) ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್) ಅಭಿಷೇಕ್ ಶರ್ಮಾ ತಿಲಕ್ ವರ್ಮಾ ರಿಂಕು ಸಿಂಗ್ ಅಕ್ಷರ್ ಪಟೇಲ್ (ಉಪನಾಯಕ) ಶಿವಂ ದುಬೆ ಹಾರ್ದಿಕ್ ಪಾಂಡ್ಯ ವಾಷಿಂಗ್ಟನ್ ಸುಂದರ್ ಜಸ್ಪ್ರೀತ್ ಬೂಮ್ರಾ ಅರ್ಷದೀಪ್ ಸಿಂಗ್ ಕುಲದೀಪ್ ಯಾದವ್ ಹರ್ಷಿತ್ ರಾಣಾ ವರುಣ ಚಕ್ರವರ್ತಿ

ಅಮೆರಿಕ: ಮೊನಾಂಕ್ ಪಟೇಲ್ (ನಾಯಕ) ಆ್ಯಂಡ್ರೆಸ್ ಗೌಸ್ (ವಿಕೆಟ್ಕೀಪರ್) ಸಾಯಿತೇಜ್ ಮುಕ್ಕಮಲ್ಲಾ ಶಯಾನ್ ಜಹಾಂಗೀರ್ ಹರಮೀತ್ ಸಿಂಗ್ ಶಿಹಾನ್ ಜಯಸೂರ್ಯ ಸಂಜಯ್ ಕೃಷ್ಣಮೂರ್ತಿ ಮಿಲಿಂದ್ ಕುಮಾರ್ ಮೊಹಮ್ಮದ್ ಮೊಹ್ಸಿನ್ ಶುಭಂ ರಾಂಜಣೆ ಶ್ಯಾಡ್ಲಿ ವ್ಯಾನ್ ಶಾಲ್ಕವೈಕ್ ಅಲಿ ಖಾನ್ ಜಸ್ದೀಪ್ ಸಿಂಗ್ ನಾಸ್ತುಷ್ ಕೆಂಜಿಗೆ ಸೌರಭ್ ನೇತ್ರಾವಳ್ಕರ್

ಪಂದ್ಯ ಆರಂಭ: ರಾತ್ರಿ 7 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಜಿಯೊಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.