ಆತಿಥೇಯ ಭಾರತ ಮತ್ತು ಶ್ರೀಲಂಕಾ ಸೇರಿದಂತೆ ಜಗತ್ತಿನ 20 ರಾಷ್ಟ್ರಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಈ ಪೈಕಿ 10 ರಾಷ್ಟ್ರಗಳು ಐಸಿಸಿಯ ಪೂರ್ಣ ಸದಸ್ಯತ್ವವನ್ನು ಹೊಂದಿದ್ದು ಉಳಿದವು ಸಹಸದಸ್ಯ ರಾಷ್ಟ್ರಗಳಾಗಿವೆ. ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ಬಾಂಗ್ಲಾದೇಶ ತಂಡವು ಭಾರತದಲ್ಲಿ ಭದ್ರತೆಗೆ ಸಂಬಂಧಿಸಿ ಅಪಾಯವಿದೆ ಎಂದು ದೂರಿ, ಟೂರ್ನಿಯಿಂದ ಹಿಂದೆಸರಿದಿದೆ. ಬಾಂಗ್ಲಾ ಬದಲಿಗೆ ಸ್ಕಾಟ್ಲೆಂಡ್ ಅವಕಾಶ ಪಡೆದಿದೆ. ‘ಕ್ರಿಕೆಟ್ ಲೋಕ’ದಲ್ಲಿ ಅಷ್ಟೇನೂ ಪರಿಚಿತವಲ್ಲದ ತಂಡಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ...

ನಮೀಬಿಯಾ: ಪ್ರಾದೇಶಿಕ ಅರ್ಹತಾ ಟೂರ್ನಿಯ ಮೂಲಕ ಆಫ್ರಿಕಾ ಖಂಡದಿಂದ ಟಿ20 ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ನಮೀಬಿಯಾ, ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ದೇಶಗಳಲ್ಲೊಂದು. 1992ರಿಂದ ಐಸಿಸಿಯ ಸಹ ಸದಸ್ಯತ್ವವನ್ನು ಹೊಂದಿದ್ದು, 2021, 2022 ಹಾಗೂ 2024ರ ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಭಾಗವಹಿಸಿದೆ. 2025ರಲ್ಲಿ ನಡೆದ ಐಸಿಸಿ ಆಫ್ರಿಕಾ ಅರ್ಹತಾ ಟೂರ್ನಿಯಲ್ಲಿ ಫೈನಲ್ ತಲುಪಿದೆ. 2021ರಲ್ಲಿ ಸೂಪರ್ 12ರ ಸುತ್ತಿಗೆ ಪ್ರವೇಶ ಪಡೆದು ಗಮನ ಸೆಳೆದಿದ್ದ ನಮೀಬಿಯಾ, ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ.

ಕೆನಡಾ: ಐಸಿಸಿ ಅಮೆರಿಕ ಪ್ರಾದೇಶಿಕ ಅರ್ಹತಾ ಟೂರ್ನಿಯಲ್ಲಿ ಆರೂ ಪಂದ್ಯ ಗೆದ್ದು ಅಜೇಯವಾಗಿ ಟ್ರೋಫಿ ಜಯಿಸಿದ್ದ ಕೆನಡಾ ತಂಡವು ವಿಶ್ವಾಸಾರ್ಹ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಬಹುತೇಕ ಭಾರತ ಮೂಲದ ಆಟಗಾರರನ್ನೇ ಹೊಂದಿರುವ ಈ ತಂಡವು 2024ರ ವಿಶ್ವಕಪ್ನಲ್ಲೂ ಆಡಿತ್ತು. 22 ವರ್ಷ ವಯಸ್ಸಿನ, ಭಾರತ ಮೂಲದ ದಿಲ್ಪ್ರೀತ್ ಬಾಜ್ವಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಲಗೈ ಸ್ಪಿನ್ನರ್ ಶಿವಂ ಶರ್ಮಾ ಹಾಗೂ ಎಡಗೈ ಬ್ಯಾಟರ್ ಯುವರಾಜ್ ಸಾಮ್ರಾ ಉತ್ತಮ ಆಟದ ವಿಶ್ವಾಸದಲ್ಲಿದ್ದಾರೆ.

ಇಟಲಿ: ಕ್ರಿಕೆಟ್ ಆಟವು ಅಷ್ಟೇನೂ ಪರಿಚಯವಿರದ ಇಟಲಿ, ಚೊಚ್ಚಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದೆ. ಐಸಿಸಿ ಯುರೋಪಿಯನ್ ಅರ್ಹತಾ ಟೂರ್ನಿಯ ಫೈನಲ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋಲನುಭವಿಸಿದರೂ, ನೆಟ್ ರನ್ ರೇಟ್ ಆಧಾರದಲ್ಲಿ ಅರ್ಹತೆ ಪಡೆದುಕೊಂಡಿದೆ. ಸಿ ಗುಂಪಿನಲ್ಲಿರುವ ಇಟಲಿ, ಮುಖ್ಯ ಸುತ್ತಿಗೆ ಪ್ರವೇಶಿಸಲು ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಜೊತೆಗೆ ಪೈಪೋಟಿ ನಡೆಸಬೇಕಿದೆ. 42 ವರ್ಷ ವಯಸ್ಸಿನ ಅನುಭವಿ ಆಟಗಾರ ವೇಯ್ನ್ ಮ್ಯಾಡ್ಸನ್ ನಾಯಕರಾಗಿದ್ದು, ತಂಡದ ಆಧಾರ ಸ್ತಂಭವೂ ಹೌದು.

ಸ್ಕಾಟ್ಲೆಂಡ್: ಸ್ಕಾಟ್ಲೆಂಡ್ ತಂಡವು ಟಿ20 ವಿಶ್ವಕಪ್ಗೆ ನೇರ ಅರ್ಹತೆ ಪಡೆಯುವಲ್ಲಿ ವಿಫಲವಾದರೂ, ಅಂತಿಮ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದ ಬಾಂಗ್ಲಾದೇಶದ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿದೆ. ಐಸಿಸಿ ಟಿ20 ಟೀಮ್ ರ್ಯಾಂಕಿಂಗ್ನಲ್ಲಿ 14ನೇ ಸ್ಥಾನ ಹೊಂದಿರುವ ಸ್ಕಾಟ್ಲೆಂಡ್, ಐದು ತಂಡಗಳು ಭಾಗವಹಿಸಿದ್ದ ಯುರೋಪಿಯನ್ ಅರ್ಹತಾ ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಆದರೂ, ಗುಂಪು ಹಂತದ ಪಂದ್ಯದಲ್ಲಿ ಬಲಿಷ್ಠ ನೆದರ್ಲೆಂಡ್ಸ್ ತಂಡವನ್ನು 6 ರನ್ ಗಳಿಂದ ಮಣಿಸಿ, ಗಮನ ಸೆಳೆದಿತ್ತು.

ಅಮೆರಿಕ: 2024ರ ಆವೃತ್ತಿಯಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿ, ಸೂಪರ್ 8ರ ಸುತ್ತಿಗೆ ಪ್ರವೇಶಿಸಿದ್ದ ಅಮೆರಿಕ ತಂಡವು ಈ ಬಾರಿಯೂ ಅಂಥದ್ದೇ ಅನಿರೀಕ್ಷಿತ ಸಾಧನೆಯ ಛಲದಲ್ಲಿದೆ. ಎಡಗೈ ಸ್ಪಿನ್ನರ್ ನೋಷ್ತುಷ್ ಕೆಂಜಿಗೆ ಹಾಗೂ ಎಡಗೈ ವೇಗಿ ಸೌರಭ್ ನೇತ್ರಾವಳ್ಕರ್ ಅವರಂತಹ ವಿಶ್ವಾಸಾರ್ಹ ಬೌಲರ್ಗಳು ತಂಡದಲ್ಲಿದ್ಧಾರೆ. ಕಳೆದ ಆವೃತ್ತಿಯಲ್ಲಿ ನಾಯಕರಾಗಿದ್ದ ಮೊನಾಂಕ್ ಪಟೇಲ್ ಅವರೇ ಈ ಬಾರಿಯೂ ತಂಡವನ್ನು ಮುನ್ನಡೆಸಲಿದ್ದಾರೆ. ಎ ಗುಂಪಿನಲ್ಲಿರುವ ಅಮೆರಿಕ, ಭಾರತ ತಂಡದ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯದ ಮೂಲಕ ಅಭಿಯಾನ ಆರಂಭಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.