‘ಡಿಆರ್ಎಸ್ ವಿವಾದವು ದೊಡ್ಡ ತಿರುವು ಪಡೆಯಲಿಲ್ಲ. ಅದು ಸುಖಾಂತ್ಯ ಕಂಡಿದ್ದು ಸಂತಸದ ವಿಷಯ. ಅದರಲ್ಲಿ ಕೊಹ್ಲಿ ಅವರು ತಮ್ಮ ಹಟ ಸಡಿಲಿಸಿ ಕ್ರಿಕೆಟ್ನ ಒಳಿತಿನ ಪರವಾಗಿದ್ದು ಶ್ಲಾಘನೀಯ. ಅದರೊಂದಿಗೆ ಅವರು 2008ರಲ್ಲಿ ನಡೆದಿದ್ದ ಮಂಕಿಗೇಟ್ ಪ್ರಕರಣದಂತೆ ಈ ವಿವಾದವು ತಿರುವು ಪಡೆಯುವ ಅಪಾಯವನ್ನು ತಪ್ಪಿಸಿದರು’ ಎಂದು ಹೇಳಿದರು.