ದುಬೈ (ಎಎಫ್‌ಪಿ): ಕುಮಾರ ಸಂಗಕ್ಕಾರ (58) ಅವರ ಅರ್ಧ ಶತಕದ ನೆರವಿನಿಂದ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಎರಡು ವಿಕೆಟ್‌ಗಳ ಜಯ ಸಾಧಿಸಿದೆ. ಇದೀಗ ಐದು ಪಂದ್ಯಗಳ ಸರಣಿ 1–-1 ರಲ್ಲಿ ಸಮಬಲದಲ್ಲಿದೆ.

ದುಬೈ ಅಂತರರಾಷ್ಟ್ರೀಯ ಕ್ರೀಡಾಂ ಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರುಗಳಲ್ಲಿ 4 ವಿಕೆಟ್‌ಗೆ 284 ರನ್ ಕಲೆ ಹಾಕಿತು. ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ (124; 140ಎ, 8ಬೌಂ) ಆಕರ್ಷಕ ಶತಕದ ಮೂಲಕ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.

ಈ ಗುರಿ ಬೆನ್ನಟ್ಟಿದ ಲಂಕಾ ತಂಡ 49.4 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 287 ರನ್ ಗಳಿಸಿ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 284 (ಅಹ್ಮದ್ ಶೆಹಜಾದ್, 124, ಮಿಸ್ಬಾ ಉಲ್ ಹಕ್ ಅಜೇಯ 59; ಸೀಕುಗೆ ಪ್ರಸನ್ನ, 45ಕ್ಕೆ1, ನುವಾನ್ ಕುಲಶೇಖರ 56ಕ್ಕೆ 1), ಶ್ರೀಲಂಕಾ 49.4 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 287(ಕುಮಾರ ಸಂಗಕ್ಕಾರ 57, ಏಂಜೆಲೊ ಮ್ಯಾಥ್ಯೂಸ್ 47; ಜುನೈದ್ ಖಾನ್ 50ಕ್ಕೆ 3, ಶಾಹಿದ್ ಅಫ್ರಿದಿ 43ಕ್ಕೆ 2)

ಫಲಿತಾಂಶ: ಲಂಕಾ ತಂಡಕ್ಕೆ 2 ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಮ್ಯಾಥ್ಯೂಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.