ಮೆಲ್ಬರ್ನ್ (ಎಎಫ್ಪಿ): ಉಸ್ಮಾನ್ ಖವಾಜ (144) ಮತ್ತು ಜೋ ಬರ್ನ್ಸ್ (128) ಅವರ ಆಕರ್ಷಕ ಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಎದು ರಾಳಿಗಳಿಗೆ ಮೊದಲು ಬ್ಯಾಟ್ ಮಾಡಲು ಆಹ್ವಾನ ನೀಡಿತು. ಈ ಅವಕಾಶವನ್ನು ಕಾಂಗರೂಗಳ ನಾಡಿನ ತಂಡ ಚೆನ್ನಾ ಗಿಯೇ ಬಳಸಿಕೊಂಡಿತು. ಆತಿಥೇಯರು ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 90 ಓವರ್ಗಳಲ್ಲಿ 3 ವಿಕೆಟ್ಗೆ 345ರನ್ ಕಲೆಹಾಕಿದರು.

ಆರಂಭಿಕ ಆಘಾತ: ಇನಿಂಗ್ಸ್ ಆರಂ ಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಸ್ಫೋಟಕ ಆಟಕ್ಕೆ ಹೆಸರಾಗಿರುವ ಡೇವಿಡ್ ವಾರ್ನರ್ (23; 12ಎ, 5ಬೌಂ) ಬೇಗನೆ ವಿಕೆಟ್ ಒಪ್ಪಿಸಿದರು.

ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದ ಅವರು ಟ್ವೆಂಟಿ–20 ಮಾದರಿಯನ್ನು ನೆನಪಿಸುವಂತೆ ಬ್ಯಾಟ್ ಬೀಸಿದರು. ಹೀಗಾಗಿ ಪ್ರವಾಸಿ ವಿಂಡೀಸ್ ಪಾಳಯದಲ್ಲಿ ಆತಂಕದ ಕಾರ್ಮೋಡ ಕವಿದಿತ್ತು. ಆದರೆ ಐದನೇ ಓವರ್ ಬೌಲ್ ಮಾಡಿದ ವೇಗಿ ಜೆರೊಮ್ ಟೇಲರ್ ತಾವು ಎಸೆದ ಮೊದಲ ಎಸೆತದಲ್ಲಿಯೇ ವಾರ್ನರ್ ವಿಕೆಟ್ ಉರುಳಿಸಿ ಸಮಾಧಾನ ತಂದರು.

ಅಪೂರ್ವ ಇನಿಂಗ್ಸ್: ಆ ಬಳಿಕ ಒಂದಾದ ಬರ್ನ್ಸ್ ಮತ್ತು ಖವಾಜ ತವರಿನ ಅಭಿ ಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು.
ವಿಂಡೀಸ್ನ ವೇಗಿಗಳು ಮತ್ತು ಸ್ಪಿನ್ನರ್ಗಳನ್ನು ಮನಬಂದಂತೆ ದಂಡಿ ಸಿದ ಇವರು ಪ್ರವಾಸಿ ತಂಡದ ರನ್ ಗತಿ ಗೆ ವೇಗ ತುಂಬುವ ಕೆಲಸ ಮಾಡಿದರು.

ಜೋಮೆಲ್ ವಾರಿಕನ್ ಹಾಕಿದ 58ನೇ ಓವರ್ನ ಮೊದಲ ಎಸೆತವನ್ನು ಪಾಯಿಂಟ್ನತ್ತ ಬಾರಿಸಿ ಮೂರು ರನ್ ಕಲೆಹಾಕಿದ ಬರ್ನ್ಸ್ ವೃತ್ತಿ ಜೀವನದ ಎರಡನೇ ಟೆಸ್ಟ್ ಶತಕ ಗಳಿಸಿ ಸಂಭ್ರಮಿಸಿದರು. ಖವಾಜ ಇದೇ ಓವರ್ನ ಮೂರನೇ ಎಸೆತದಲ್ಲಿ ಒಂದು ರನ್ ಗಳಿಸಿ ಮೂರಂಕಿ ಮುಟ್ಟಿದರು.

ಆ ಬಳಿಕವೂ ಇವರಿಬ್ಬರ ಅಬ್ಬರ ತಗ್ಗಲಿಲ್ಲ. ವಿಂಡೀಸ್ ನಾಯಕ ಜಾಸನ್ ಹೋಲ್ಡರ್ 74 ಓವರ್ನಲ್ಲಿ ಕಾರ್ಲೊಸ್ ಬ್ರಾಥ್ವೈಟ್ ಕೈಗೆ ಚೆಂಡು ನೀಡಿದ್ದು ಫಲ ನೀಡಿತು. 230 ಎಸೆತಗಳಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸಿ ಆಡುತ್ತಿದ್ದ ಬರ್ನ್ಸ್ ಈ ಓವರ್ನ ಎರಡನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟಂಪ್ ಔಟ್ ಆದರು. ಇದರೊಂದಿಗೆ 258ರನ್ಗಳ ಎರಡನೇ ವಿಕೆಟ್ ಜೊತೆಯಾಟಕ್ಕೂ ತೆರೆ ಬಿತ್ತು.

ಬಳಿಕ ನಾಯಕ ಸ್ಟೀವನ್ ಸ್ಮಿತ್ (ಬ್ಯಾಟಿಂಗ್ 32; 49ಎ, 3ಬೌಂ) ಜತೆಗೂಡಿದ ಖವಾಜ ತಮ್ಮ ಸೊಬಗಿನ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾದ ಇನಿಂಗ್ಸ್ಗೆ ಮತ್ತಷ್ಟು ರಂಗು ತುಂಬಿದರು. 227 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸಿ ಆಡುತ್ತಿದ್ದ ಖವಾಜಗೆ ಟೇಲರ್ ಪೆವಿಲಿಯನ್ ಹಾದಿ ತೋರಿಸಿದರು. ಔಟಾಗುವ ಮುನ್ನ ಅವರು ಸ್ಮಿತ್ ಜತೆ ಮೂರನೇ ವಿಕೆಟ್ಗೆ 41ರನ್ ಸೇರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್: 90 ಓವರ್ಗಳಲ್ಲಿ 3 ವಿಕೆಟ್ಗೆ 345 (ಜೋ ಬರ್ನ್ಸ್ 128, ಡೇವಿಡ್ ವಾರ್ನರ್ 23, ಉಸ್ಮಾನ್ ಖವಾಜ 144, ಸ್ಟೀವನ್ ಸ್ಮಿತ್ ಬ್ಯಾಟಿಂಗ್ 32; ಜೆರೊಮ್ ಟೇಲರ್ 2ಕ್ಕೆ83, ಕ್ರೆಗ್ ಬ್ರಾಥ್ವೇಟ್ 1ಕ್ಕೆ31).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.