ರಿಯೊ ಡಿ ಜನೈರೊ (ಪಿಟಿಐ):  ನಿಖರ ಗುರಿ ಹಿಡಿಯುವಲ್ಲಿ ಯಶ ಕಂಡ ಭಾರತದ ಅತನು ದಾಸ್ ಅವರು ಒಲಿಂಪಿಕ್ ಆರ್ಚರಿ ಸ್ಪರ್ಧೆಯ
ವೈಯಕ್ತಿಕ ವಿಭಾಗದ ಅರ್ಹತಾ ಹಂತದಲ್ಲಿ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅವರು 720 ರಲ್ಲಿ 683 ಪಾಯಿಂಟ್ ಕಲೆಹಾಕಿದರು. ಮೊದಲ 36 ಬಾಣಗಳನ್ನು ಪ್ರಯೋಗಿಸಿದ ಬಳಿಕ ದಾಸ್ 10ನೇ ಸ್ಥಾನದಲ್ಲಿದ್ದರು. ಆದರೆ ಕೊನೆಯ 36 ಬಾಣಗಳ ಪ್ರಯೋಗದಲ್ಲಿ ಹೆಚ್ಚಿನ ನಿಖರತೆ ಸಾಧಿಸಿ, ಐದನೇ ಸ್ಥಾನ ಪಡೆದುಕೊಂಡರು.

ಪುರುಷರ ವಿಭಾಗದಲ್ಲಿ ದಾಸ್ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅರ್ಹತಾ ಹಂತದಲ್ಲಿ ಪ್ರಭಾವಿ ಪ್ರದರ್ಶನ ನೀಡಿದ ಕಾರಣ ಅವರಿಗೆ ಆರಂಭಿಕ ಸುತ್ತುಗಳಲ್ಲಿ ಸುಲಭ ಸವಾಲು ಎದುರಾಗಲಿದ್ದು, ಹೆಚ್ಚಿನ ಪೈಪೋಟಿ ಇಲ್ಲದೆ ಕ್ವಾರ್ಟರ್ ಫೈನಲ್ ಪ್ರವೇಶಿಸುವ ನಿರೀಕ್ಷೆಯಿದೆ.

ನಾಕೌಟ್ ಹಂತದ ಮೊದಲ ಸುತ್ತಿನ ಹಣಾಹಣಿಯಲ್ಲಿ ಕೋಲ್ಕತದ ಈ ಸ್ಪರ್ಧಿ ನೇಪಾಳದ ಜೀತ್ಬಹಾದೂರ್ ಮುಕ್ತನ್ ಅವರ ಸವಾಲು ಎದುರಿಸಲಿದ್ದಾರೆ. ಮುಕ್ತನ್ ಪ್ರಸ್ತುತ ವಿಶ್ವ ರ್್ಯಾಂಕಿಂಗ್ನಲ್ಲಿ 60ನೇ ಸ್ಥಾನದಲ್ಲಿದ್ದಾರೆ.

ದಾಸ್ ಸೆಮಿಫೈನಲ್ ಪ್ರವೇಶಿಸಲು ಯಶಸ್ವಿಯಾದರೆ ವಿಶ್ವದ ರ್್ಯಾಂಕಿಂಗ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆಟಗಾರ ಹಾಲೆಂಡ್ನ ಜೆಫ್ ವಾನ್ ಡೆನ್ಬರ್ಗ್ ಅವರು ಎದುರಾಗುವ ಸಾಧ್ಯತೆಯಿದೆ. ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಜಪಾನ್ನ ತಕಹರು ಫುರುಕುವಾ ಅವರನ್ನು ಹಿಂದಿಕ್ಕಲು ಯಶಸ್ವಿಯಾಗಿರುವುದು ದಾಸ್ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ಒದಗಿಸಿದೆ. ತಕಹರು ಅರ್ಹತಾ ಹಂತದಲ್ಲಿ ಏಳನೇ ಸ್ಥಾನ ಪಡೆದರು.

ಕಿಮ್ ವಿಶ್ವದಾಖಲೆ: ದಕ್ಷಿಣ ಕೊರಿಯಾದ ಕಿಮ್ ವೂ–ಜಿನ್ ಒಲಿಂಪಿಕ್ ಕೂಟದ ಮೊದಲ ದಿನ ವಿಶ್ವದಾಖಲೆ ನಿರ್ಮಿಸಿದರು. ಪುರುಷರ
ಆರ್ಚರಿ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಅವರು 700 ಪಾಯಿಂಟ್ ಕಲೆಹಾಕಿದರು. ಎರಡು ಬಾರಿಯ ವಿಶ್ವಚಾಂಪಿಯನ್ ಕಿಮ್ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.