ರಿಯೊ ಡಿ ಜನೈರೊ (ರಾಯಿಟರ್ಸ್): ರಿಯೊ ಒಲಿಂಪಿಕ್ ಕೂಟದಲ್ಲಿ ಶನಿವಾರ ಅವಘಡವೊಂದು ಸಂಭವಿಸಿದ್ದು, ಫ್ರಾನ್ಸ್ನ ಜಿಮ್ನಾಸ್ಟಿಕ್ಸ್ ಸ್ಪರ್ಧಿ ಅರ್ಹತಾ ಸುತ್ತಿನ ಪ್ರದರ್ಶನದ ವೇಳೆ ಕಾಲು ಮುರಿದುಕೊಂಡಿದ್ದಾರೆ.

ಫ್ರಾನ್ಸ್ ತಂಡದ ಸಮೀರ್ ಐತ್ ಸಯೀದ್ ಅವರು ವಾಲ್ಟ್ನಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ದೂರದಿಂದ ಓಡೋಡಿ ಬಂದು ಮೇಲಕ್ಕೆ ನೆಗೆದು ಕಸರತ್ತು ಮಾಡುತ್ತಾ ನೆಲಕ್ಕೆ ಬೀಳುವಾಗ ಆಯ ತಪ್ಪಿದೆ.

ಅವರ ಎಡಗಾಲು ಮ್ಯಾಟ್ ಮೇಲೆ ಬಲವಾಗಿ ಅಪ್ಪಳಿಸಿದ ಕಾರಣ ಮಂಡಿಯಿಂದ ಕೆಳಭಾಗ ತುಂಡಾಗಿ ನೇತಾಡುತ್ತಿತ್ತು. ಸಮೀರ್ ಒಂದು ಕೈಯಲ್ಲಿ ಕಾಲನ್ನು ಹಿಡಿದು ಮತ್ತೊಂದು ಕೈಯಿಂದ ಮುಖ ಮುಚ್ಚಿಕೊಂಡರು. ಫ್ರಾನ್ಸ್ ತಂಡದ ಸಹ ಆಟಗಾರರು ಕೂಡಾ ಈ ದೃಶ್ಯ ನೋಡಲಾಗದೆ ಕೆಲಹೊತ್ತು ಮುಖಮುಚ್ಚಿ ನಿಂತರು.

ಅಧಿಕಾರಿಗಳು ಹಾಗೂ ಸ್ವಯಂಸೇವಕರು ಕೂಡಲೇ ಅವರ ನೆರವಿಗೆ ಬಂದರು. ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.