ನವದೆಹಲಿ (ಪಿಟಿಐ): ಭಾರತ ತಂಡ ಇಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ 9ರಿಂದ 12 ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಗುರುವಾರ ಅರ್ಜೆಂಟೀನಾ ವಿರುದ್ಧ ಪೈಪೋಟಿ ನಡೆಸಲಿದೆ.

ಮಂಗಳವಾರ ನಡೆದ ಕೊರಿಯಾ ವಿರುದ್ಧದ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿರುವುದರಿಂದ ಭಾರತದ ಕ್ವಾರ್ಟರ್ ಫೈನಲ್ ಆಸೆ ಕಮರಿ ಹೋಗಿದೆ. ಆದರೆ ತಂಡ ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಅಗ್ರ ಹತ್ತು ತಂಡಗಳ ಗುಂಪಿನಲ್ಲಿ ಸ್ಥಾನ ಪಡೆದು ಈ ನಿರಾಸೆಯನ್ನು ಮರೆಯುವ ಇರಾದೆಯಲ್ಲಿದೆ.

ಕೊರಿಯಾ ವಿರುದ್ಧದ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾರತ ಆರಂಭದಲ್ಲಿ 3–1 ರಿಂದ ಮುನ್ನಡೆ ಕಾಯ್ದುಕೊಂಡು ಗೆಲುವಿನ ಭರವಸೆ ಮೂಡಿಸಿತ್ತು. ಆದರೆ ಕೊನೆಯಲ್ಲಿ ಡ್ರಾ ಸಾಧಿಸಿ ನಿರಾಸೆ ಅನುಭವಿಸಿತ್ತು.

ಭಾರತ ಈ ಪಂದ್ಯದಲ್ಲಿ ಜಯ ಪಡೆದರೆ, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಪಂದ್ಯ ದಲ್ಲಿ ಜಯ ಸಾಧಿಸುವ ತಂಡದ ಜೊತೆ ಶನಿವಾರ 9 ಮತ್ತು 10 ನೇ ಸ್ಥಾನಕ್ಕಾಗಿ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.