ನ್ಯೂಯಾರ್ಕ್ (ಪಿಟಿಐ): ಭಾರತದ ಲಿಯಾಂಡರ್ ಪೇಸ್ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಜೋಡಿ 6-2, 6-7, 1-0ರಲ್ಲಿ ಚೈನೀಸ್ ತೈಪೆಯಿಯ ಯಂಗ್ ಜಾನ್ ಚೇನ್ ಹಾಗೂ ಮಾರುಯಸ್ ಫ್ರೈಸ್ಟಿಯನ್ ಬರ್ಗ್ ವಿರುದ್ಧ ಗೆಲುವು ಪಡೆಯಿತು. ಮೊದಲ ಸೆಟ್‌ನಲ್ಲಿ ಗೆಲುವು ಪಡೆದ ಪೇಸ್ ಹಾಗೂ ವೆಸ್ನಿನಾ ಜೋಡಿ ಎರಡನೇ ಸೆಟ್‌ನಲ್ಲಿ ಮತ್ತೆ ಹಿನ್ನೆಡೆ ಕಂಡಿತು. ಮತ್ತೆ ಲಯ ಕಂಡುಕೊಂಡು ಮೂರನೇ ಸೆಟ್‌ನಲ್ಲಿ ಗೆಲುವಿನ ನಗೆ ಬೀರಿತು.

ಮೂರನೇ ಸುತ್ತಿಗೆ ರೋಹನ್ ಜೋಡಿ: ಸೊಗಸಾದ ಆಟವಾಡಿದ ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ -ಹಕ್ ಖುರೇಷಿ ಜೋಡಿ ಇದೇ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿತು.

ಬೋಪಣ್ಣ ಹಾಗೂ ಖುರೇಷಿ ಜೋಡಿ 7-6, 7-6ರಲ್ಲಿ ಅಮೆರಿಕದ ಜೇಮ್ಸ ಸರೆಟನಿ ಮತ್ತು ಜರ್ಮನಿಯ ಪಿಲಿಪ್ ಮಾರ್ಸ್ ವಿರುದ್ಧ ಗೆಲುವು ಸಾಧಿಸಿತು. ಆದರೆ, ರೋಹನ್ ಬೋಪಣ್ಣ ಹಾಗೂ ಅಮೆರಿಕದ ವನಿಯಾ ಕಿಂಗ್ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ 6-7, 6-4, 0-1ರಲ್ಲಿ ಐದನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಬಾರ್ಬೊರಾ ಜಲೆವೊವಾ ಹಾಗೂ ಜರ್ಮನಿಯ ಪಿಲಿಪ್ ಪೆಟ್ಚಿಂಚರ್ ಎದುರು ಸೋಲು ಅನುಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.