ಚಾರ್ಲ್ಸ್ಟನ್, ಅಮೆರಿಕ (ಪಿಟಿಐ): ಸಾನಿಯಾ ಮಿರ್ಜಾ ಅವರು ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಫ್ಯಾಮಿಲಿ ಸರ್ಕಲ್ ಕಪ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್ನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಾನಿಯಾ 6-4, 6-4ರಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಜರ್ಮನಿಯ ಸಬಿನೆ ಲಿಸಿಕಿ ಅವರನ್ನು ಮಣಿಸಿದರು.

ಮೂರೂವರೆ ವರ್ಷಗಳ ನಂತರ ಮೊದಲ ಬಾರಿಗೆ ಸಾನಿಯಾ ಮಿರ್ಜಾ ಈ ಟೂರ್ನಿಯಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಈ ಮೊದಲು 2007ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಎಂಟರಘಟ್ಟಕ್ಕೆ ಪ್ರವೇಶಿಸಿದ್ದರು. ಮುಂದಿನ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಚೀನಾದ 11ನೇ ಶ್ರೇಯಾಂಕದ ಶಾಹು ಪೆಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ. ಪೆಂಗ್ ಅವರು ಪ್ರೀ ಕ್ವಾರ್ಟರ್ಫೈನಲ್ನಲ್ಲಿ 6-3, 5-7,6-2ರಲ್ಲಿ ರಷ್ಯಾದ ನಡಿಯಾ ಪೆಟ್ರೋವಾ ಅವರನ್ನು ಮಣಿಸಿದರು.

‘ನನ್ನ ದೇಹ ಸಾಕಷ್ಟು ಆಯಾಸಗೊಂಡಿದೆ. ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿಯೂ ಸಾಕಷ್ಟು ಪ್ರತಿರೋಧ ಎದುರಾಗುತ್ತಿದೆ. ಆಯಾಸದ ನಡುವೆಯು ಪಂದ್ಯ ಗೆದ್ದ ಸಂತಸವು ನನಗಿದೆ’ ಎಂದು ಪಂದ್ಯದ ನಂತರ ಸಾನಿಯಾ ಪ್ರತಿಕ್ರಿಯಿಸಿದರು.

ಸೋಮ್ದೇವ್ ನಿರ್ಗಮನ:
ಹ್ಯೂಸ್ಟನ್, ಅಮೆರಿಕ (ಪಿಟಿಐ): ಎರಡನೇ ಶ್ರೇಯಾಂಕಿತ ಆಟಗಾರ ಭಾರತದ ಸೋಮ್ದೇವ್ ದೇವವರ್ಮನ್ ಇಲ್ಲಿ ನಡೆಯುತ್ತಿರುವ ಯು.ಎಸ್. ಪುರುಷರ ಕ್ಲೈ ಕೋರ್ಟ್ ಚಾಂಪಿಯನ್ಷಿಪ್ನ ಸಿಂಗಲ್ಸ್ನಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದರು. ಶುಕ್ರವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಮ್ದೇವ್ 4-6, 1-6ರಲ್ಲಿ ಸ್ಪೇನ್ನ ಗೊಯಿಲೆರ್ಮೊ ಲೋಪಿಜ್ ಅವರ ವಿರುದ್ಧ ಸೋಲು ಕಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.