ಬೆಂಗಳೂರು: ಡೇವಿಸ್ ಕಪ್ ಆಟಗಾರ ವಿಷ್ಣುವರ್ಧನ್ ಮತ್ತು ಚೀನಾ ತೈಪಿಯ ಟಿ ಚೆನ್ ಇಲ್ಲಿ ನಡೆಯುತ್ತಿರುವ ಐಟಿಎಫ್ ಪುರುಷರ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಇಬ್ಬರೂ ಪ್ರಯಾಸದ ಗೆಲುವು ಪಡೆದು ಫೈನಲ್ಗೆ ಲಗ್ಗೆಯಿಟ್ಟರು.

ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ವಿಷ್ಣುವರ್ಧನ್ 6-4, 6-7, 6-3 ರಲ್ಲಿ ರಂಜೀತ್ ವಿ ಮುರುಗೇಶನ್ ಅವರನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಚೆನ್ 3-6, 7-6, 6-4 ರಲ್ಲಿ ಜೀವನ್ ನೆಡುಂಚೆಳಿಯನ್ ವಿರುದ್ಧ ಜಯ ಸಾಧಿಸಿದರು.

ಮೈಸೂರಿನಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ವಿಷ್ಣು ಮೊದಲ ಸೆಟ್ನ್ನು ಸುಲಭದಲ್ಲಿ ಗೆದ್ದುಕೊಂಡರು. ಆದರೆ ತಿರುಗೇಟು ನೀಡಿದ ರಂಜೀತ್ ಎರಡನೇ ಸೆಟ್ನ್ನು ಟೈಬ್ರೇಕರ್ನಲ್ಲಿ ತಮ್ಮದಾಗಿಸಿಕೊಂಡರು. ಅಂತಿಮ ಸೆಟ್ನಲ್ಲಿ ಲಯ ಕಂಡುಕೊಂಡ ವಿಷ್ಣುವರ್ಧನ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರು.

`ಪಂದ್ಯ ಕಠಿಣವಾಗಿತ್ತು. ಸರ್ವ್ಗಳೇ ನನ್ನ ಬಲ. ಆದ್ದರಿಂದ ಪಂದ್ಯದಲ್ಲಿ ಸರ್ವ್ ಮೇಲೆಯೇ ಗಮನ ಕೇಂದ್ರೀಕರಿಸಿದೆ. ಗೆಲುವು ಪಡೆಯಲು ಸಾಧ್ಯವಾದದ್ದು ಸಂತಸ ಉಂಟುಮಾಡಿದೆ~ ಎಂದು ಪಂದ್ಯದ ಬಳಿಕ ವಿಷ್ಣುವರ್ಧನ್ ಪ್ರತಿಕ್ರಿಯಿಸಿದರು.

28ರ ಹರೆಯದ ಚೆನ್ ಕೂಡಾ ಗೆಲುವಿನ ಹಾದಿಯಲ್ಲಿ ಸಾಕಷ್ಟು ಪ್ರಯಾಸಪಟ್ಟರು. ಮೊದಲ ಸೆಟ್ನಲ್ಲಿ ಸೋಲು ಅನುಭವಿಸಿದ ಅವರು ಎರಡನೇ ಸೆಟ್ನ ಟೈಬ್ರೇಕರ್ನಲ್ಲಿ 3-6 ರಲ್ಲಿ ಹಿನ್ನಡೆ ಅನುಭವಿಸಿದ್ದರು. ಆ ಬಳಿಕ ಅಸಾಮಾನ್ಯ ರೀತಿಯಲ್ಲಿ ತಿರುಗೇಟು ನೀಡಿ ಗೆಲುವಿನ ನಗು ಬೀರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.