ಬೆಂಗಳೂರು: ಹಾಲಿ ಚಾಂಪಿಯನ್ ನವದೆಹಲಿಯ ಧ್ರುವ್ ಸರ್ದಾ ಇಲ್ಲಿ ನಡೆಯುತ್ತಿರುವ 25ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್ ಷಿಪ್‌ನ ಮೂರನೇ ದಿನ ಮುನ್ನಡೆ ಸಾಧಿಸಿದ್ದಾರೆ.

ಒರಾಯನ್ ಮಾಲ್‌ನ ‘ಬ್ಲೂ ಒ’ ಬೌಲಿಂಗ್ ಸೆಂಟರ್‌ನಲ್ಲಿ ಗುರುವಾರ ನಡೆದ ಪುರುಷರ ವಿಭಾಗದಲ್ಲಿ ಧ್ರುವ್ ಒಟ್ಟು 2510 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದರು.

ತಮಿಳುನಾಡಿನ ಶಬ್ಬೀರ್ ಧನ್ಕೋಟ್ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಬಳಿ 2458 ಪಾಯಿಂಟ್‌ಗಳಿವೆ.

ಕರ್ನಾಟಕದ ಆಕಾಶ್ ಅಶೋಕ್ ಕುಮಾರ್ (2434) ಹಾಗೂ ಗಿರೀಶ್ (2341) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಎರಡನೇ ದಿನ ಆಕಾಶ್ ಅಗ್ರಸ್ಥಾನದಲ್ಲಿದ್ದರು.

ಒಟ್ಟು 32 ಸ್ಪರ್ಧಿಗಳು 32ರ ಸುತ್ತು ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.