ದುಬೈ (ಐಎಎನ್ಎಸ್): ಜಾವಗಲ್ ಶ್ರೀನಾಥ್ ಅವರು ಟ್ವೆಂಟಿ-–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸುವ ರೆಫರಿ ಹಾಗೂ ಅಂಪೈರ್ಗಳ ಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಪ್ರಕಟಿಸಿತು. ಭಾರತ ತಂಡದ ಮಾಜಿ ವೇಗಿ ಶ್ರೀನಾಥ್ ಅಲ್ಲದೆ, ಡೇವಿಡ್ ಬೂನ್, ರಂಜನ್ ಮದುಗಲೆ ಮತ್ತು ರೋಶನ್ ಮಹಾನಾಮ ಅವರು ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅಂಪೈರ್ಗಳ ಪಟ್ಟಿಯಲ್ಲಿ ಭಾರತದ ಎಸ್. ರವಿ ಮಾತ್ರ ಇದ್ದಾರೆ. ಅಲೀಮ್ ದಾರ್, ಕುಮಾರ ಧರ್ಮಸೇನ, ಸ್ಟೀವ್ ಡೇವಿಸ್, ಮರಾಯಸ್ ಎರಾಸ್ಮಸ್, ಇಯಾನ್ ಗೌಲ್ಡ್, ರಿಚರ್ಡ್ ಇಲಿಂಗ್ವರ್ಥ್, ರಿಚರ್ಡ್ ಕೆಟೆಲ್ ಬರೋ, ನೈಜೆಲ್ ಲಾಂಗ್, ಬ್ರೂಸ್ ಆಕ್ಸೆನ್ಫರ್ಡ್, ಪೌಲ್ ರೀಫೆಲ್, ರಾಡ್ ಟಕರ್, ಬಿಲಿ ಬೌಡೆನ್ ಮತ್ತು ರನ್ಮೋರ್ ಮಾರ್ಟಿನೆಜ್ ಅವರು ಕಾರ್ಯನಿರ್ವಹಿಸಲಿರುವ ಇತರ ಅಂಪೈರ್ಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.