ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಡ ತೋರಿದ ಪ್ರದರ್ಶನ ಹೆಮ್ಮೆ ಎನಿಸುತ್ತದೆ; ಪ್ರೋತ್ಸಾಹಿಸಿದ ಎಲ್ಲರಿಗೂ ಅಭಿನಂದನೆ: ಮಿಥಾಲಿ ರಾಜ್‌

Last Updated 24 ಜುಲೈ 2017, 11:31 IST
ಅಕ್ಷರ ಗಾತ್ರ

ಬೆಂಗಳೂರು: ಇಂಗ್ಲೆಂಡ್ ತಂಡ ತನ್ನ ತವರಿನಲ್ಲಿ ಭಾರತ ತಂಡವನ್ನು ರೋಚಕವಾಗಿ ಮಣಿಸಿ ಮಹಿಳೆಯರ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು. ಇಂಗ್ಲೆಂಡ್‌ನ ಗುರಿ ಬೆನ್ನಟ್ಟಿದ ಭಾರತ ಮಿಥಾಲಿ ರಾಜ್‌ ಪಡೆಯ ವಿಶ್ವಕಪ್‌ ಕನಸು ಭಗ್ನವಾಯಿತು.

ಕೊನೆಯ ಕ್ಷಣದ ವರೆಗೂ ಇಂಗ್ಲೆಂಡ್‌ ವಿರುದ್ಧ ಸೆಣಸಾಡಿದ ತನ್ನ ತಂಡದ ಬಗ್ಗೆ ನಾಯಕಿ ಮಿಥಾಲಿ ರಾಜ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಪ್ರೋತ್ಸಾಹಿಸಿದ ಭಾರತೀಯರಿಗೆ ಅಭಿನಂದನೆ ತಿಳಿಸಿದ್ದಾರೆ. 

‘ನನ್ನ ತಂಡ ತೋರಿದ ಪ್ರದರ್ಶನ ಹೆಮ್ಮೆ ಎನಿಸುತ್ತದೆ ಮತ್ತು ಪ್ರೋತ್ಸಾಹಿಸಿದ ಎಲ್ಲರಿಗೂ ಅಭಿನಂದನೆಗಳು. 2017ರ 4ನೇ ಮಹಿಳೆಯರ ವಿಶ್ವಕಪ್‌ನಲ್ಲಿ ಮಹಿಳಾ ಕ್ರಿಕೆಟಿಗರಾದ ನಾವು ಬಹಳಷ್ಟು ಪ್ರೀತಿಯನ್ನು ಪಡೆದಿದ್ದೇವೆ ಮತ್ತು ನಂಬಲಾಗದಷ್ಟು ಬೆಂಬಲ ಗಳಿಸಿದ್ದೇವೆ ಎಂದು ಮಿಥಾಲಿ ರಾಜ್ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT