ನವದೆಹಲಿ (ಪಿಟಿಐ): ಅಮೋಘ ಪ್ರದರ್ಶನ ಮುಂದುವರಿಸಿರುವ ಭಾರತದ ಸೈನಾ ನೆಹ್ವಾಲ್ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸಿಯು ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಸೈನಾ 21-10, 22-20ರಲ್ಲಿ ಥಾಯ್ಲೆಂಡ್ನ ಸಪ್ಸಿರೀ ತಾಯೆರತ್ತಾಂಚಾಯಿ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಈ ಋತುವಿನಲ್ಲಿ ಎರಡನೇ ಪ್ರಶಸ್ತಿ ಜಯಿಸುವತ್ತ ಅವರು ದಾಪುಗಾಲಿರಿಸಿದ್ದಾರೆ.

ಅಗ್ರ ಶ್ರೇಯಾಂಕದ ಸೈನಾ ಮೊದಲ ಗೇಮ್ನಲ್ಲಿ ಎದುರಾಳಿ ಮೇಲೆ ಪೂರ್ಣ ಪಾರಮ್ಯ ಸಾಧಿಸಿದರು. ಪರಿಣಾಮಕಾರಿ ಸ್ಮ್ಯಾಷ್ಗಳ ಮೂಲಕ ಆತಿಥೇಯ ಆಟಗಾರ್ತಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಸತತ 8 ಪಾಯಿಂಟ್ ಗೆದ್ದಿದ್ದಕ್ಕೆ ಅದಕ್ಕೊಂದು ಸಾಕ್ಷಿ.

ಆದರೆ ಎರಡನೇ ಗೇಮ್ನಲ್ಲಿ ಐದನೇ ರ್ಯಾಂಕ್ನ ನೆಹ್ವಾಲ್ಗೆ ಪ್ರತಿರೋಧ ವ್ಯಕ್ತವಾಯಿತು. ಥಾಯ್ಲೆಂಡ್ನ ಸಪ್ಸಿರೀ ಈ ಗೇಮ್ನಲ್ಲಿ ಒಂದು ಹಂತದಲ್ಲಿ ಮುನ್ನಡೆ ಕೂಡ ಸಾಧಿಸಿದ್ದರು. ಆ ನಂತರ 19-19 ಪಾಯಿಂಟ್ಗೆ ಬಂದು ನಿಂತರು. ಈ ಸಂದರ್ಭದಲ್ಲಿ ದೀರ್ಘ ರ್ಯಾಲಿಗಳು ಕಂಡುಬಂದವು. ಬಳಿಕ ಪ್ರಭಾವಿ ಆಟದ ಮೂಲಕ ಮುನ್ನಡೆ ಪಡೆದ ಸೈನಾ ಗೇಮ್ ಹಾಗೂ ಪಂದ್ಯವನ್ನು ತಮ್ಮದಾಗಿಸಿಕೊಂಡರು.

`ಎಲ್ಲವೂ ಸುಗಮವಾಗಿ ಸಾಗುತ್ತಿದೆ. ಮೊದಲ ಗೇಮ್ನಲ್ಲಿ ಸುಲಭವಾಗಿ ಗೆದ್ದರು. ಆದರೆ ಎರಡನೇ ಗೇಮ್ನ ಆರಂಭದಲ್ಲಿ ಸೈನಾ ಅವಸರ ಮಾಡಿದರು. ಆಕ್ರಮಣಕಾರಿಯಾಗಿ ಆಡಲು ಹೋಗಿ ಕೆಲವೊಂದು ತಪ್ಪೆಸಗಿದರು~ ಎಂದು ರಾಷ್ಟ್ರೀಯ ಕೋಚ್ ಪಿ.ಗೋಪಿಚಂದ್ ತಿಳಿಸಿದರು.

ಪ್ರಣೀತ್ಗೆ ಸೋಲು: ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಭಾರತದ ಸಾಯಿ ಪ್ರಣೀತ್ ಸೋಲು ಕಂಡರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಣೀತ್ 15-21, 17-21ರಲ್ಲಿ ಚೀನಾದ ಚೆನ್ ಯೇಕನ್ ಎದುರು ನಿರಾಶೆ ಅನುಭವಿಸಿದರು.

ವರ್ಮ ಸಹೋದರರು ಕೂಡ ಟೂರ್ನಿಯಿಂದ ನಿರ್ಗಮಿಸಿದರು. ಎಂಟರ ಘಟ್ಟದ ಪಂದ್ಯದಲ್ಲಿ ಸೌರಭ್ ವರ್ಮ 6-21, 8-21ರಲ್ಲಿ ಇಂಡೋನೇಷ್ಯಾದ ಸೋನಿ ದ್ವಿ ಕುನ್ಕೊರೊ ಎದುರೂ, ಸಮೀರ್ ವರ್ಮ 16-21, 13-21ರಲ್ಲಿ ಚೀನಾದ ಹುವಾನ್ ಗಾವೊ ವಿರುದ್ಧವೂ ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.