ಲಂಡನ್ (ಪಿಟಿಐ): ಲಂಡನ್ ಒಲಿಂಪಿಕ್ಸ್‌ಗೆ `ಡೌ~ ರಾಸಾಯನಿಕ ಕಂಪೆನಿ ಪ್ರಾಯೋಜಕತ್ವ ವಹಿಸಿರುವುದನ್ನು ಪ್ರತಿಭಟಿಸಿ ಈ ಕ್ರೀಡಾಕೂಟದ ನಡವಳಿಕೆ ಆಯೋಗದ ಆಯುಕ್ತರಾದ ಮೆರೆಡಿತ್ ಅಲೆಕ್ಸಾಂಡರ್ ರಾಜೀನಾಮೆ ನೀಡಿದ್ದಾರೆ.

ಭೋಪಾಲ್ ಅನಿಲ ದುರಂತಕ್ಕೂ `ಡೌ~ ಕಂಪೆನಿಗೂ ಸಂಬಂಧ ಇರುವ ಹಿನ್ನೆಲೆಯಲ್ಲಿ ಮೆರೆಡಿತ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. `ಡೌ ರಾಸಾಯನಿಕ ಕಂಪೆನಿಯ ವಕಾಲತ್ತು ವಹಿಸಿ ಮಾತನಾಡಲು ನನಗೆ ಸಾಧ್ಯವಿಲ್ಲ. ಏಕೆಂದರೆ ಮಾನವ ಹಕ್ಕುಗಳನ್ನು ಉಲ್ಲಂಘನೆ ಆಗಲು ಈ ಕಂಪೆನಿ ಕಾರಣವಾಗಿದೆ. ಅನಿಲ ದುರಂತ ಸಂಭವಿಸಿ 27 ವರ್ಷ ಕಳೆದರೂ ಅಲ್ಲಿ ಸಮಸ್ಯೆ ಇದೆ. ಈಗಲೂ ಸಾವಿರಾರು ಮಂದಿ ಸಮಸ್ಯೆ ಎದುರಿಸುತ್ತಿದ್ದಾರೆ~ ಎಂದು ಅಲೆಕ್ಸಾಂಡರ್ ನುಡಿದಿದ್ದಾರೆ.

`ಇಂತಹ ಕಂಪೆನಿಯ ಪ್ರಾಯೋಜಕತ್ವದ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳು ಪಾಲ್ಗೊಂಡು ಸಂಭ್ರಮಪಡುವುದಾದರೂ ಹೇಗೆ~ ಎಂದು ಅವರು ಪ್ರಶ್ನಿಸಿದ್ದಾರೆ. ಅವರ ಈ ರಾಜೀನಾಮೆ ನಿರ್ಧಾರವನ್ನು ಭಾರತದ ಸರ್ಕಾ ರೇತರ ಸಂಸ್ಥೆಗಳು ಸ್ವಾಗತಿಸಿವೆ.

`ಡೌ~ ಪ್ರಾಯೋಜಕತ್ವ ವಹಿಸಿರುವುದಕ್ಕೆ ಭಾರತ ಒಲಿಂಪಿಕ್ ಸಮಿತಿ ಕೂಡ ವಿರೋಧ ವ್ಯಕ್ತಪಡಿಸಿತ್ತು. 1984 ರಲ್ಲಿ ಭೋಪಾಲ್ ಅನಿಲ ದುರಂತಕ್ಕೆ ಕಾರಣವಾಗಿದ್ದ ಅಮೆರಿಕಾ ಮೂಲದ ಯೂನಿಯನ್ ಕಾರ್ಬೈಡ್ ಕಂಪೆನಿ ಈಗ ಒಲಿಂಪಿಕ್ಸ್‌ಗೆ ಪ್ರಾಯೋಜಕತ್ವ ವಹಿಸಿರುವ `ಡೌ~ ಆಡಳಿತದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.