ಗ್ರಾಸ್ ಐಸ್ಲೆಟ್ (ಪಿಟಿಐ):  ಹಲವು ಕೊರತೆಗಳ ನಡುವೆಯೂ ಭಾರತದ ಕ್ರೀಡಾಪಟುಗಳು ರಿಯೊ ಒಲಿಂಪಿಕ್ಸ್ನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಪದಕ ಗೆಲ್ಲದ ಅಥ್ಲೀಟ್ಗಳ ಕುರಿತು ಕಠೋರವಾದ ಟೀಕೆಗಳನ್ನು ಮಾಡುವುದು ಸಲ್ಲದು ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಎದುರಿನ ಮೂರನೇ ಟೆಸ್ಟ್ನಲ್ಲಿ ಗೆದ್ದ ಭಾರತ ತಂಡವು ಸರಣಿಯನ್ನೂ ಕೈವಶ ಮಾಡಿ ಕೊಂಡಿತ್ತು. ಪಂದ್ಯದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುತ್ತಿರುವ ಕ್ರೀಡಾಪಟುಗಳು ಮಾಡಿರುವ ಸಿದ್ದತೆ ಗಳನ್ನು ಅವಲೋಕಿಸಬೇಕು. ಅವರು ಸಾಕಷ್ಟು ಪರಿಶ್ರಮ, ತ್ಯಾಗ, ಸಮರ್ಪಣಾ ಭಾವದಿಂದ ಅಭ್ಯಾಸ ಮಾಡಿರುತ್ತಾರೆ. ಆದರೆ, ಪದಕ ಜಯಿಸದೇ ಇದ್ದಾಗ ಜನರು ಹಗುರವಾಗಿ ಮಾತನಾಡುತ್ತಾರೆ. ಆ ರೀತಿಯ ಧೋರಣೆ ಇರಬಾರದು. ಕ್ರಿಕೆಟ್ನಲ್ಲಿಯೂ ಎಲ್ಲ ಪಂದ್ಯಗಳ ಲ್ಲಿಯೂ ಗೆಲ್ಲುವುದು ಸಾಧ್ಯವಿಲ್ಲ. ಪ್ರತಿಯೊಂದು ಪಂದ್ಯವೂ ವಿಭಿನ್ನ’ ಎಂದು ಕೊಹ್ಲಿ ಹೇಳಿದ್ದಾರೆ.

‘ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕನಿಷ್ಠ ಸೌಲಭ್ಯಗಳನ್ನು ನಮ್ಮ ಕೆಲವು ಅಥ್ಲೀಟ್ಗಳು ಬಳಸಿರುತ್ತಾರೆ. ಆದರೂ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡುತ್ತಾರೆ. ಅವರನ್ನು ಅಭಿನಂದಿಸಬೇಕು ಮತ್ತು ಪ್ರೋತ್ಸಾಹಿಸಬೇಕು’ ಕೊಹ್ಲಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.