ರಿಯೊ ಡಿ ಜನೈರೊ: ಜೀವನ ಒಡ್ಡಿದ ಸವಾಲುಗಳನ್ನು ಬದಿಗಿಟ್ಟು ಅಮೋಘವಾದ ಸಾಮರ್ಥ್ಯವನ್ನು ಪ್ರದರ್ಶಿಸಿದ ದೈಹಿಕವಾಗಿ ವಿಶೇಷ ಸಾಮರ್ಥ್ಯವುಳ್ಳ ಅಥ್ಲೀಟ್‌ಗಳ ಪ್ಯಾರಾಲಿಂಪಿಕ್ಸ್‌ಗೆ ಭಾನುವಾರ ರಾತ್ರಿ ತೆರೆ ಬಿತ್ತು.

ಸೆಪ್ಟೆಂಬರ್ 7ರಿಂದ ಆರಂಭವಾಗಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಎರಡು ಚಿನ್ನದ ಪದಕಗಳು ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದರು.

ಜಾವೆಲಿನ್ ಥ್ರೋನಲ್ಲಿ ದೇವೇಂದ್ರ ಜಜಾರಿಯಾ (ಚಿನ್ನ), ಹೈಜಂಪ್‌ನಲ್ಲಿ ಮಾರಿಯಪ್ಪನ್ ತಂಗವೇಲು (ಚಿನ್ನ), ಹಾಗೂ ವರುಣ್ ಸಿಂಗ್ ಭಾಟಿ ಮತ್ತು ಶಾಟ್‌ಪಟ್‌ನಲ್ಲಿ ದೀಪಾ ಮಲಿಕ್ (ಬೆಳ್ಳಿ) ಅವರು ರಿಯೊದ ಅಂಗಳದಲ್ಲಿ ಕೀರ್ತಿ ಪತಾಕೆ ಹಾರಿಸಿದ್ದರು.

2014ರಲ್ಲಿ ಫಿಫಾ ವಿಶ್ವಕಪ್, ಕಳೆದ ಆಗಸ್ಟ್‌ನಲ್ಲಿ ಒಲಿಂಪಿಕ್ಸ್ ಮತ್ತು ಅದರ ನಂತರ ಪ್ಯಾರಾಲಿಂಪಿಕ್ಸ್ ಕೂಟಗಳನ್ನು ಬ್ರೆಜಿಲ್ ಸಂಘಟಿಸಿತ್ತು. ಈ ಎಲ್ಲ ಕ್ರೀಡಾಕೂಟಗಳ ಸಿದ್ಧತೆಗಾಗಿ 1,192 ದಿನಗಳಿಂದ ಸಾಂಬಾ ನಾಡು ಶ್ರಮಿಸಿತ್ತು. ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪ್ರತಿಷ್ಠಿತ ಕೂಟಗಳನ್ನು ಸಂಘಟಿಸಿ ಸೈ ಎನಿಸಿಕೊಂಡಿದೆ.

ಪ್ಯಾರಾಲಿಂಪಿಕ್ಸ್ ಮುಕ್ತಾಯ ಸಮಾರಂಭ ನಡೆದ ಮರಕಾನಾ ಕ್ರೀಡಾಂಗಣದಲ್ಲಿ 45 ಸಾವಿರ ಪ್ರೇಕ್ಷಕರು ಸೇರಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.