ನವದೆಹಲಿ (ಪಿಟಿಐ): ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಹೊನ್ನಪ್ಪ ಸಿ ಗೌಡ ಅವರು ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಎರಡನೇ ಆವೃತ್ತಿಗೆ ದೆಹಲಿ ದಬಂಗ್ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದಾರೆ.

ಜುಲೈ 18ರಿಂದ ಆರಂಭಗೊಳ್ಳಲಿರುವ ಪ್ರೊ ಲೀಗ್ ಟೂರ್ನಿಯಲ್ಲಿ ದೆಹಲಿ ತಂಡಕ್ಕೆ ಹೊನ್ನಪ್ಪ ಅವರು ಮಾರ್ಗದರ್ಶನ ಮಾಡಲಿದ್ದಾರೆ.

ಕೋಚ್ ನೇಮಕ ವಿಚಾರ ಪ್ರಕಟಿಸಿದ ದೆಹಲಿ ದಬಂಗ್ ತಂಡ ಮಾಲೀಕರಾದ ರಾಧಾ ಕಪೂರ್, ‘ಈ ನುರಿತ ಕ್ರೀಡಾಪಟುವಿನ ಅನುಭವ ನಮ್ಮ ತಂಡದ ಆಟಗಾರರಿಗೆ ನೆರವಾಗಲಿದೆ ಎಂದು ಕೊಂಡಿದ್ದೇನೆ. ಎರಡನೇ ಆವೃತ್ತಿಗೆ ತಂಡವು ಕಠಿಣ ಅಭ್ಯಾಸ ನಡೆಸುತ್ತಿದೆ. ಕೆಲವು ಹೊಸ ಆಟಗಾರರೂ ತಂಡದಲ್ಲಿದ್ದು, ಯುವ ಹಾಗೂ ಹಿರಿಯ ಆಟಗಾರರಿಂದ ತಂಡವು ಸಮತೋಲನದಿಂದ ಕೂಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.