ಬೆಂಗಳೂರು: ಎಚ್‌ಎಎಲ್ ತಂಡ ಐ-ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಶನಿವಾರ ಜೆಸಿಟಿ ಜೊತೆ ಪೈಪೋಟಿ ನಡೆಸಲಿದೆ.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿ ಬೆಂಗಳೂರಿನ ತಂಡ ಇದೆ. ಏಕೆಂದರೆ ಮೊದಲ ಸುತ್ತಿನ ಪಂದ್ಯದಲ್ಲಿ ಎಚ್‌ಎಎಲ್ 1-0 ಗೋಲಿನಿಂದ ಜೆಸಿಟಿ ವಿರುದ್ಧ ಜಯ ಸಾಧಿಸಿತ್ತು.ಶನಿವಾರ ಕೂಡಾ ಅದೇ ರೀತಿಯ ಫಲಿತಾಂಶವನ್ನು ಪುನರಾವರ್ತಿಸುವ ಲೆಕ್ಕಾಚಾರ ಎಚ್‌ಎಎಲ್ ಹೊಂದಿದೆ. ‘ಶನಿವಾರದ ಪಂದ್ಯಕ್ಕಾಗಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುವೆವು’ ಎಂದು ತಂಡದ ಮುನ್ನಡೆ ಆಟಗಾರ ಕ್ಸೇವಿಯರ್ ವಿಜಯ್‌ಕುಮಾರ್ ತಿಳಿಸಿದರು.

ಎಚ್‌ಎಎಲ್ ತಂಡ ಇದೀಗ ಒಟ್ಟು 14 ಪಾಯಿಂಟ್‌ಗಳೊಂದಿಗೆ 9ನೇ ಸ್ಥಾನದಲ್ಲಿದೆ. ಎಚ್‌ಎಎಲ್ ತಂಡಕ್ಕೆ ಪಂದ್ಯದಲ್ಲಿ ಮುನ್ನಡೆ ಆಟಗಾರ ಎ. ಹಮ್ಜಾ ಅವರ ಸೇವೆ ಲಭಿಸುತ್ತಿಲ್ಲ. ಕಳೆದ ಪಂದ್ಯದಲ್ಲಿ ಅವರು ಎರಡು ಹಳದಿ ಕಾರ್ಡ್ ಪಡೆದ ಕಾರಣ ಒಂದು ಪಂದ್ಯ ಆಡುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.