ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ  ಎಸ್.ಅಮೋಘ್ ಹಾಗೂ ಬೆನಜಿರ್ ಮೀರಾ ಇಲ್ಲಿ ನಡೆಯುತ್ತಿರುವ 49ನೇ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ 12-14 ವರ್ಷ (ಬಾಲಕರು) ಹಾಗೂ 16 ವರ್ಷಕ್ಕಿಂತ ಮೇಲಿನವರ (ಬಾಲಕಿಯರು) ವಿಭಾಗದ ರಿಂಕ್ ರೇಸ್-11ಎ (ಕ್ವಾಡ್ ಸ್ಕೇಟರ್ಸ್) 1000 ಮೀಟರ್‌ನಲ್ಲಿ ಬಂಗಾರದ ಪದಕ ಜಯಿಸಿದ್ದಾರೆ.

ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿ ನಲ್ಲಿರುವ ಬಿಬಿಎಂಪಿ ಸ್ಕೇಟಿಂಗ್ ರಿಂಕ್‌ನಲ್ಲಿ ಗುರುವಾರ ಜರುಗಿದ ಸ್ಪರ್ಧೆಯಲ್ಲಿ ಅಮೋಘ್ ಸೊಗಸಾದ ಪ್ರದರ್ಶನದ ಮೂಲಕ ಈ ಸಾಧನೆ ಮಾಡಿದರು.

15000 ಮೀಟರ್‌ನ (ಎಲಿಮಿನೇಷನ್ ರೇಸ್) ಬಾಲಕರ 14-16 ವರ್ಷದೊಳಗಿನವರ ವಿಭಾಗದಲ್ಲಿ ರಾಜ್ಯದ ವಿ.ವಸಿಷ್ಟ, ರಿಂಕ್ ರೇಸ್-11ಎ (ಕ್ವಾಡ್ ಸ್ಕೇಟರ್ಸ್)ನ 10-12 ವರ್ಷದೊಳಗಿನವರ ವಿಭಾಗದಲ್ಲಿ ಎಂ.ಅಭಿಷೇಕ್, 8-10 ವರ್ಷದೊಳಗಿನವರ ವಿಭಾಗದಲ್ಲಿ ರೋಹಿತ್ ಎಂ.ಗೌಡ ಚಿನ್ನದ ಪದಕ ಗೆದ್ದರು.

ಬಾಲಕಿಯರ 14-16 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕದ ಶ್ರಾವಣಿ ಶೆಟ್ಟಿ, 12-14 ವರ್ಷದೊಳಗಿನವರ ವಿಭಾಗದಲ್ಲಿ ಸುರಕ್ಷಾ ಆರ್.ಶೆಟ್ಟಿ, 8-10 ವರ್ಷದೊಳಗಿನವರ ವಿಭಾಗದಲ್ಲಿ ಎಸ್.ಸ್ವಾತಿ ಮೊದಲ ಸ್ಥಾನ ಪಡೆದರು.

ಫಲಿತಾಂಶ ಇಂತಿದೆ: (ಎಲಿಮಿನೇಷನ್ ರೇಸ್ ) 15000 ಮೀಟರ್: ಬಾಲಕರ ವಿಭಾಗ (16 ವರ್ಷ): ಮೀತ್ ಷಾ (ಗುಜರಾತ್)-1, ವಿಕ್ರಮ್ ಇಂಗಾಳೆ (ಮಹಾರಾಷ್ಟ್ರ)-2. ಜಿ.ರಾಘವೇಂದ್ರ (ಕರ್ನಾಟಕ)-3. 14-16 ವರ್ಷ: ವಿ.ವಸಿಷ್ಟ (ಕರ್ನಾಟಕ)-1, ಸ್ಮಿತ್ ಸಿಂಗ್ (ಗುಜರಾತ್)-2, ಕೆ.ಹರಿಹರನ್ (ತಮಿಳುನಾಡು)-3.  12-14 ವರ್ಷ: ಎ.ತೇಜೇಶ್ವರ್ (ತಮಿಳುನಾಡು)-1, ಪ್ರತೀಕ್ ಪ್ರಸಾದ್ (ಕರ್ನಾಟಕ)-2, ಪಂಕಜ್ ಉಪಾಸನಾ (ಗುಜರಾತ್)-3."
ಬಾಲಕಿಯರ ವಿಭಾಗ: 16 ವರ್ಷ: ಕಾನಿಕಾ ಭಲ್ಲಾ (ಗುಜರಾತ್)-1, ಎಚ್.ಪ್ರಗ್ನಾ (ಕರ್ನಾಟಕ)-2, ಸೃಷ್ಟಿ (ತಮಿಳುನಾಡು)-3. 14-16 ವರ್ಷ: ಅನೋಲಿ ಷಾ (ಗುಜರಾತ್)-1, ಅನುಜಾ (ಮಹಾರಾಷ್ಟ್ರ)-2, ಜೆ.ಜಮೆಲ್ (ಕರ್ನಾಟಕ).

ರೋಡ್ ರೇಸ್-1 (ಕ್ವಾಡ್ ಸ್ಕೇಟರ್ಸ್): ಬಾಲಕರು: 10-12 ವರ್ಷ: ಎಂ.ದಿಲೀಪ್(ಆಂಧ್ರಪ್ರದೇಶ)-1, ಅನೀಷ್ (ಮಹಾರಾಷ್ಟ್ರ)-2, ಎನ್.ಗೌತಮ್ (ಕರ್ನಾಟಕ)-3. ಬಾಲಕಿಯರು: 16 ವರ್ಷ: ಸೋನಾಲಿ ದೇವಗನ್ (ಪಂಜಾಬ್)-1, ಕೆ.ನಾಗ ಪ್ರಣೀತ್ (ಆಂಧ್ರಪ್ರದೇಶ)-2, ಎಂ.ರಜತಾ (ಕರ್ನಾಟಕ).

ರಿಂಕ್ ರೇಸ್-11ಎ (ಕ್ವಾಡ್ ಸ್ಕೇಟರ್ಸ್): ಬಾಲಕರು: 12-14 ವರ್ಷ: ಎಸ್.ಅಮೋಘ್ (ಕರ್ನಾಟಕ)-1, ಕೆ.ವಿಷ್ಣವರ್ಧನ್ ರೆಡ್ಡಿ (ಆಂಧ್ರಪ್ರದೇಶ)-2, ಪಿ.ಶ್ರೀನಿವಾಸ್ ನಿಖಿಲ್ (ಆಂಧ್ರಪ್ರದೇಶ)-3. 10-12 ವರ್ಷ: ಎಂ.ಅಭಿಷೇಕ್ (ಕರ್ನಾಟಕ)-1, ಎಸ್.ಮನೋಜ್ (ಕರ್ನಾಟಕ)-2, ವೇದಾಂತ್ (ಮಧ್ಯಪ್ರದೇಶ)-3. 8-10 ವರ್ಷ: ರೋಹಿತ್ ಎಂ.ಗೌಡ (ಕರ್ನಾಟಕ)-1.

ಬಾಲಕಿಯರು: 16 ವರ್ಷ: ಬೆನಜಿರ್ ಮೀರಾ (ಕರ್ನಾಟಕ)-1, ಕೆ.ನಾಗಾ ಪ್ರಣೀತಾ ( ಆಂಧ್ರಪ್ರದೇಶ)-2, ಸೋನಾಲಿ ದೇವಗನ್ (ಪಂಜಾಬ್)-3. 14-16 ವರ್ಷ: ಶ್ರಾವಣಿ ಶೆಟ್ಟಿ (ಕರ್ನಾಟಕ)-1, ಸಚಿನ್ಮಯ (ಹರಿಯಾಣ)-2, ನೇಹಾ ಹರೀಶ್ (ಕರ್ನಾಟಕ)-3. 12-14 ವರ್ಷ: ಸುರಕ್ಷಾ ಆರ್.ಶೆಟ್ಟಿ (ಕರ್ನಾಟಕ)-1. 10-12 ವರ್ಷ: ರಚಿತಾ (ಹರಿಯಾಣ)-1, ಹರ್ಷಿತಾ ಎಂ.ಗೌಡ (ಕರ್ನಾಟಕ)-2, ಪಟೇಲ್ ವೃಂದಾ ಪ್ರಮೋದ್ (ಗುಜರಾತ್)-3. 8-10 ವರ್ಷ: ಎಸ್.ಸ್ವಾತಿ (ಕರ್ನಾಟಕ)-1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT